ಹುಬ್ಬಳ್ಳಿ: ಸಂಚಾರಿ ನಿಯಮ ಪಾಲಿಸದೇ ಕುಡಿದ ಮತ್ತಿನಲ್ಲಿ ಬೈಕ್ ಸವಾರಿ ಮಾಡಿ ಬಳಿಕ ತನ್ನ ಜೊತೆಗೆ ಜಗಳ ಮಾಡಿದ ಯುವಕನಿಗೆ ಪೊಲೀಸ್ ಪೇದೆ ನಡು ರಸ್ತೆಯಲ್ಲಿಯೇ ಥಳಿಸಿರುವ ಘಟನೆ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.ಬೈಕ್ ಸವಾರರಾದ ಸಾಯಿಕುಮಾರ್ ಹಾಗೂ ಅಂಬರೀಶ್ ಇಬ್ಬರೂ ಕುಡಿದ ಮತ್ತಿನಲ್ಲಿ ಹೆಲ್ಮೆಟ್ ಇಲ್ಲದೆ ಒನ್ ವೇ ನಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆಗ ಉತ್ತರ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಡಿ.ಎಸ್. ಬೇವೂರು ಸವಾರರನ್ನು ತಡೆದಿದ್ದಾರೆ. ಆದ್ರೆ ಅಲ್ಲಿಂದ ಇಬ್ಬರೂ ಸವಾರರು ತಪ್ಪಿಸಿಕೊಂಡು ಮುಂದೆ ಬಂದಿದ್ದಾರೆ.ತಪ್ಪಿಸಿಕೊಂಡು ಹೋದ ಹಿನ್ನೆಲೆಯಲ್ಲಿ ಹಿಂಬಾಲಿಸಿಕೊಂಡು ಬಂದು ಹಿಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ಆಟೋದಲ್ಲಿ ಠಾಣೆಗೆ ಕರೆದುಕೊಂಡು ಹೊಗಲು ಯತ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದಿದೆ. ಅಲ್ಲದೆ ಇಬ್ಬರು ವಾಹನ ಸವಾರರು ಪೊಲೀಸರ ಜೊತೆ ಅನುಚಿತ ವರ್ತನೆ ತೋರಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ನಡು ರಸ್ತೆಯಲ್ಲಿ ಯುವಕನಿಗೆ ಹೊಡೆದಿದ್ದಾರೆ.Sign in to your account
Username or Email Address


Password

 Remember Me


