ಬೆಂಗಳೂರು: ನಗರದ ವಾಹನ ಸವಾರರೇ ಎಚ್ಚರ. ನಿಮ್ಮ ವಾಹನಗಳ ಬಗ್ಗೆ ಎಚ್ಚರವಾಗಿರಿ. ಒಂದು ವೇಳೆ ಎಚ್ಚರ ತಪ್ಪಿದ್ದರೆ ನಿಮ್ಮ ವಾಹನ ಗಾಯಬ್ ಆಗೋದು ಗ್ಯಾರಂಟಿ. ಏಕೆಂದರೆ ಕಳ್ಳರ ಹಾಟ್ ಸ್ಪಾಟ್ ಆಗಿದೆ ಬ್ರ್ಯಾಂಡ್ ಬೆಂಗಳೂರು.ನಿಜಕ್ಕೂ ಇದು ಬೆಂಗಳೂರಿಗರು ಬೆಚ್ಚಿ ಬೀಳಿಸೋ ಸುದ್ದಿ. ರಾಜ್ಯದಲ್ಲಿ ದಿನೇ ದಿನೇ ವಾಹನ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಿಶೇಷ ಅಂದರೆ ಈ ಕಳ್ಳರ ಹಾಟ್ ಸ್ಪಾಟ್ ಸಿಲಿಕಾನ್ ಸಿಟಿ ಬೆಂಗಳೂರು. ಕಳೆದ ಮೂರು ವರ್ಷಗಳಲ್ಲಿ ಪೊಲೀಸ್ ಇಲಾಖೆಯೇ ನೀಡಿರುವ ಅಂಕಿ ಅಂಶದ ಪ್ರಕಾರ 17,600 ವಾಹನಗಳು ಕಳ್ಳತನವಾಗಿದ್ದು ಪೊಲೀಸರ ನಿದ್ರೆ ಕೆಡಿಸಿದೆ.2015ರಲ್ಲಿ 5,763 ವಾಹನಗಳು ಕಳತನವಾಗಿದೆ. 2016ರಲ್ಲಿ 6,293 ವಾಹನಗಳು, 2017ರಲ್ಲಿ 5,544 ವಾಹನ ಕಳ್ಳತನವಾಗಿದ್ದು, ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯವೇ ಕಳ್ಳರಿಗೆ ಕಾಮಧೇನುವಾಗಿದೆ. ಕಳೆದ 3 ವರ್ಷಗಳಲ್ಲಿ ಬರೋಬ್ಬರಿ 29,034 ವಾಹನ ರಾಜ್ಯದಲ್ಲಿ ಕಳ್ಳತನವಾಗಿದೆ.ಬೆಂಗಳೂರು ಹೊರತು ಪಡಿಸಿ ಅರಮನೆ ನಗರಿ ಎರಡನೇ ಸ್ಥಾನದಲ್ಲಿದ್ದು, 1,450 ವಾಹನಗಳು ಕಳ್ಳತನವಾಗಿದೆ. ಹುಬ್ವಳ್ಳಿ-ಮಂಡ್ಯದಲ್ಲಿ 1,373 ಕೇಸ್ ಗಳು ಹಾಗೂ ಬೆಳಗಾವಿಯಲ್ಲಿ 905 ವಾಹನಗಳು 3 ವರ್ಷಗಳಲ್ಲಿ ಕಳ್ಳತನವಾಗಿ ಟಾಪ್ ನಾಲ್ಕು ಜಿಲ್ಲೆಗಳಾಗಿವೆ. ಸೇಫ್ ಸಿಟಿ, ಸೇಫ್ ರಾಜ್ಯ ಅನ್ನೋ ಕರ್ನಾಟಕದಲ್ಲೆ ಇಷ್ಟು ದೊಡ್ಡ ಕಳ್ಳತನವಾಗಿದೆ.Sign in to your account
Username or Email Address


Password

 Remember Me


