ಮೈಸೂರು: ಮಹಿಳೆಯ ಜೊತೆ ಚೆಲ್ಲಾಟವಾಡುತ್ತಾ ಗುಡ್ಡಪ್ಪ ಸಿಕ್ಕಿಬಿದ್ದಿದ್ದು ಗ್ರಾಮಸ್ಥರು ಆತನನ್ನು ಅರೆಬೆತ್ತಲೆ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಇಮ್ಮಾವು ಗ್ರಾಮದಲ್ಲಿ ನಡೆದಿದೆ.ಮಹದೇವಸ್ವಾಮಿ ಗುಡ್ಡಪ್ಪ ಸಿಕ್ಕಿಬಿದ್ದ ವ್ಯಕ್ತಿ. ಮಹದೇವಸ್ವಾಮಿ ತನ್ನ ಮೈಮೇಲೆ ಸಿದ್ದಪ್ಪಾಜಿ ದೇವರು ಬರುತ್ತಾರೆಂದು ಎಲ್ಲರನ್ನು ನಂಬಿಸಿದ್ದ. 15 ವರ್ಷಗಳಿಂದ 16 ಗ್ರಾಮಗಳಲ್ಲಿ ದೇವಸ್ಥಾನ ಕಟ್ಟಿಕೊಂಡಿರೋ ಮಹದೇವಸ್ವಾಮಿ, ಐಷಾರಾಮಿ ಮನೆಯಲ್ಲಿ ಜೀವನ ನಡೆಸುತ್ತಿದ್ದ.ಗುಡ್ಡಪ್ಪ ಇಮ್ಮಾವು ಗ್ರಾಮದ ಮಹಿಳೆ ಜೊತೆಗಿದ್ದಾಗ ಸಿಕ್ಕಿಬಿದ್ದಿದ್ದಾನೆ. ಮಹಿಳೆ ಒಂದು ವರ್ಷದಿಂದ ತನ್ನ ಪತಿಯಿಂದ ದೂರವಾಗಿದ್ದಾರೆ. ಅವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ನಂಜನಗೂಡು ಗ್ರಾಮಾಂತರ ಪೊಲೀಸರು ಗುಡ್ಡಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.Sign in to your account
Username or Email Address


Password

 Remember Me


