ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಮಂಗಳೂರಿನ ಮೂಡುಶೆಡ್ಡೆಯಲ್ಲಿರುವ ಪ್ರವಾಸಿತಾಣ ಪಿಲಿಕುಳ ನಿಸರ್ಗಧಾಮದ ವಾಟರ್ ಪಾರ್ಕಿನಲ್ಲಿ ಇಬ್ಬರು ಅನ್ಯಕೋಮಿನ ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ ಬಂದಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ.ಬಳಿಕ ಪೊಲೀಸರು ಆಗಮಿಸಿ, ಯುವಕ-ಯುವತಿಯರನ್ನು ವಶಕ್ಕೆ ಪಡೆದರೂ ಕಾರ್ಯಕರ್ತರು ಪೊಲೀಸರ ನಡುವೆಯೇ ಹಲ್ಲೆ ನಡೆಸಿದ್ದಾರೆ. ಯುವಕ-ಯುವತಿಯರು ಒಂದೇ ಕಾಲೇಜಿನವರಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಹೋಗಿದ್ದರು. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆವಿದ್ಯಾರ್ಥಿಗಳು ಅನ್ಯಕೋಮಿನವರು ಎಂದು ನೋಡಿದ ಸ್ಥಳೀಯ ಯುವಕರು ಹಿಂದೂ ಸಂಘಟನೆಯವರಿಗೆ ಸುದ್ದಿ ಮುಟ್ಟಿಸಿದ್ದದ್ದಾರೆ. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಪಾರ್ಕ್ ಒಳನುಗ್ಗಿ ಹಲ್ಲೆ ನಡೆಸಿದ್ದಾರೆ. ಅನ್ಯಕೋಮಿನ ಯುವಕರು ಹಿಂದು ಯುವತಿಯರನ್ನು ಪ್ರೀತಿಯ ನೆಪದಲ್ಲಿ ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದಾರೆಂಬ ಆರೋಪದ ಮಧ್ಯೆ ಜೊತೆಯಾಗಿ ಸಿಕ್ಕಿಬಿದ್ದವರ ಮೇಲೆ ಸಂಘಟನೆ ಕಾರ್ಯಕರ್ತರು ಚೆನ್ನಾಗಿಯೇ ಉಪಚರಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮೆಹಂದಿ ಶಾಸ್ತ್ರದಂದೇ ರಾತ್ರಿ ನಾಪತ್ತೆಯಾಗಿದ್ದ ಯುವತಿ ಈಗ ಜೈಲು ಪಾಲು!ಯುವತಿಗೆ ಪೊಲೀಸರ ಎದುರೇ ಹಲ್ಲೆ ನಡೆಸಿದ್ದ ಹಿಂದು ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


