ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೊಸ ವರ್ಷಕ್ಕೆ ವಿಭಿನ್ನ ರೀತಿಯ ಸ್ವಾಗತ ಕೋರಿದ್ದು, ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.ಚಾಮುಂಡಿ ಬೆಟ್ಟ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡುತ್ತಿದ್ದು, ಮೈಸೂರಿನ ಯೋಗ ನರಸಿಂಹ ಸ್ವಾಮಿ ದೇವಾಲಯದಿಂದ ಭಕ್ತರಿಗೆ ಲಾಡು ವಿತರಣೆ ಮಾಡುತ್ತಿದ್ದಾರೆ. ದೇವಾಲಯ ಭಕ್ತಾದಿಗಳಿಗೆ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸುಮಾರು ಎರಡು ಲಕ್ಷ ಲಾಡು ವಿತರಿಸುತ್ತಿದೆ.ಮೈಸೂರಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದು, ದೇವಾಲಯಗಳಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅರಮನೆಯಂತೂ ಬೆಳಕಿನ ಚಿತ್ತಾರದಿಂದ ಕಂಗೊಳಿಸುತ್ತಿದ್ದು, ವಿವಿಧ ಬಣ್ಣದ ಬೆಳಕಿನ ಚಿತ್ತಾರ ನಯನ ಮನೋಹರವಾಗಿತ್ತು. ಪ್ಯಾಲೇಸ್ ಮೇಲಿಂದ ಸಿಡಿದ ಸಿಡಿಮದ್ದು ನೋಡುಗರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯಿತು.ಹೊಸ ವರ್ಷದ ಪ್ರಯುಕ್ತ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಶುಭಾಶಯ ಕೋರಿದ್ದು, ಎಲ್ಲರಿಗೂ ಆಂಗ್ಲ ನೂತನ ಸಂವತ್ಸರದ ಹಾರ್ದಿಕ ಶುಭಾಶಯಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.Sign in to your account
Username or Email Address


Password

 Remember Me


