ವಿಜಯಪುರ: ರೈಲಿನ ಮುಂದೆ ಬಿದ್ದು ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರದ ರೈಲು ನಿಲ್ದಾಣದಲ್ಲಿ ನಡೆದಿದೆ.ಕೆ. ರಾಠೋಡ್(39) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಕಾಲುಗಳ ಮೇಲೆ ರೈಲು ಹರಿದು ಯುವಕನ ಎರಡೂ ಕಾಲು ಕಟ್ ಆಗಿವೆ. ಅದೃಷ್ಟವಶಾತ್ ಜೀವಕ್ಕೆ ಯಾವುದೇ ಅಪಾಯ ಆಗಿಲ್ಲ. ರಾಠೋಡ್ ರೈಲ್ವೆ ಹಳಿಯ ಮೇಲೆ ಒದ್ದಾಡುತ್ತಿದ್ದುದನ್ನು ನೋಡಿ ತಕ್ಷಣ ಸಾರ್ವಜನಿಕರು ಹಾಗೂ ರೈಲು ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದಾರೆ.ಆತ್ಮಹತ್ಯೆ ಯತ್ನಕ್ಕೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


