ಚಿಕ್ಕಮಗಳೂರು: ಕಾಲೇಜು ಪ್ರಿನ್ಸಿಪಾಲ್ ನಿಂದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.ಚಿಕ್ಕಮಗಳೂರು ನಗರದ ಪಿಯು ಕಾಲೇಜುವೊಂದರ ಪ್ರಿನ್ಸಿಪಾಲ್ ಪರಮೇಶ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನೊಂದ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈ ಅವರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.ಆರೋಪಿ ಪರಮೇಶ್ ಈ ಹಿಂದೆಯು ಕೂಡ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌಜನ್ಯ ಕುರಿತಂತೆ ಪ್ರಕರಣ ದಾಖಲಾಗಿತ್ತು. ಪರಮೇಶ್ 3-4 ವರ್ಷಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದಾನೆ. ಈಗ ತಮ್ಮ ಕಾಲೇಜಿನಲ್ಲಿ ಓದುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಈದ್ ಮಿಲಾದ್ ಹಬ್ಬದ ದಿನ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಕಾಲೇಜಿಗೆ ಕರೆಸಿಕೊಂಡಿದ್ದಾನೆ.ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿನಿ ಒಬ್ಬಳೆ ಇದುದ್ದರಿಂದ ಆರೋಪಿ ಪರಮೇಶ್ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ದೌಜನ್ಯ ಎಸಗಿದ್ದಾನೆ. ನಂತರ ವಿದ್ಯಾರ್ಥಿನಿ ಎಸ್‍ಪಿ ಅಣ್ಣಾಮಲೈಗೆ ಕರೆ ಮಾಡಿ ದೂರು ನೀಡಿದ್ದಾರೆ.  ಎಸ್‍ಪಿ ವಿದ್ಯಾರ್ಥಿನಿ ಜೊತೆ ಮಾತನಾಡಿ ವಿಚಾರ ತಿಳಿದುಕೊಂಡು ಬಳಿಕ ಚಿಕ್ಕಮಗಳೂರು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೊಡಿಸಿದ್ದಾರೆ.ಮಹಿಳಾ ಪೊಲೀಸರು ಆರೋಪಿ ಪರಮೇಶ್ ನನ್ನು ಬಂಧಿಸಿ, ಆತನ ವಿರುದ್ಧ 354, 376, 511 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.Sign in to your account
Username or Email Address


Password

 Remember Me


