ದಾವಣಗೆರೆ: ಮದುವೆಯಾಗೋದಾಗಿ ನಂಬಿಸಿ, ವಂಚಿಸಿರುವ ಆರೋಪವೊಂದು ಪೊಲೀಸ್ ಪೇದೆಯೊಬ್ಬರ ವಿರುದ್ಧ ಕೇಳಿಬಂದಿದೆ.ದಾವಣಗೆರೆಯ ಹರಪನಹಳ್ಳಿ ತಾಲೂಕಿನ ಮಾಡಲಗೇರಿ ಮೂಲದ ಪೇದೆ ಮಂಜುನಾಥ್ ಕಣಿವೆ ಶಿವಮೊಗ್ಗದ ಕುಂಸಿಯಲ್ಲಿ ಪೇದೆಯಾಗಿದ್ದಾನೆ. ಕಳೆದ 6 ತಿಂಗಳ ಹಿಂದೆ ಹರಪ್ಪನಹಳ್ಳಿ ತಾಲೂಕು ಹುಲಿಕಟ್ಟೆ ಗ್ರಾಮದ ಮಂಜುಳಾ ಎಂಬ ಯುವತಿ ಪತ್ರಕರ್ತರೊಬ್ಬರಿಗೆ ಫೋನ್ ಮಾಡಲು ಹೋಗಿ ಅದು ಮಿಸ್ಸಾಗಿ ಪೇದೆ ಮಂಜುನಾಥ್‍ ಗೆ ಹೋಗಿದೆ.ಆದ್ರೆ ಕೂಡಲೇ ಯುವತಿ ಮಿಸ್ಸಾಗಿ ಬಂದಿದೆ ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಆದರೆ ಪದೇ ಪದೇ ಫೋನ್ ಮಾಡುತ್ತಿದ್ದ ಮಂಜುನಾಥ್ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ನಂತರ ಮದುವೆಯಾಗೋದಾಗಿ ನಂಬಿಸಿ, ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ.ಆದರೆ ಈಗ ಮಂಜುನಾಥ್ ಜಾತಿಯ ನೆಪವೊಡ್ಡಿ ಯುವತಿಯಿಂದ ದೂರ ಸರಿಯುತ್ತಿದ್ದಾನೆ. ಹೀಗಾಗಿ ನೊಂದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮಂಜುಳಾ ಅವರ ಬೆನ್ನಿಗೆ ಸಂಘಟನೆಗಳೂ ನಿಂತಿದ್ದು, ಯುವತಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡೋದಾಗಿ ಎಚ್ಚರಿಸಿವೆ.Sign in to your account
Username or Email Address


Password

 Remember Me


