ಯಾದಗಿರಿ: 25 ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನ ಮತ್ತೋರ್ವ ವ್ಯಕ್ತಿಯನ್ನ ಹುಟ್ಟು ಹಾಕಿ ಆತನ ಆಸ್ತಿ ಕಬಳಿಸಲು ಯತ್ನಿಸಿದ ಭೂಪನೊಬ್ಬ ತಗ್ಲಾಕೊಂಡಿದ್ದಾನೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದ ನಿವಾಸಿ ನರಸಪ್ಪ ಎಂಬಾತ ಕಳೆದ 25 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ. ಮೃತ ನರಸಪ್ಪನ ಹೆಸರಿಗೆ ಸುಮಾರು 3 ಎಕರೆ 28 ಗುಂಟೆ ಜಮೀನು ಇದೆ. ಆದರೆ ನರಸಪ್ಪ ಮೃತಪಟ್ಟು 25 ವರ್ಷಗಳಾಗಿದ್ರೂ ಆತನ ಕುಟುಂಬಸ್ಥರು ಆಸ್ತಿ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದ ಇದೇ ಗ್ರಾಮದ ಗಂಗಪ್ಪ ಎಂಬಾತ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ಆಸ್ತಿ ವರ್ಗಾವಣೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದಾನೆ.ಅದರಂತೆ ಯಾದಗಿರಿಯ ಹೆಡಗಿಮುದ್ರಾ ಗ್ರಾಮದ ನಿವಾಸಿ ನರಸಪ್ಪ ಎಂಬ ನಕಲಿ ವ್ಯಕ್ತಿಯನ್ನ ಸೃಷ್ಟಿಸಿ ಗಂಗಪ್ಪ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಇದೆ ಗ್ರಾಮದ ಸುಭಾಷ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಹೆಡಗಿಮುದ್ರ ಗ್ರಾಮದ ನರಸಪ್ಪನೇ ಜಮೀನಿನ ಮಾಲೀಕ ಅಂತ ಸುಭಾಷ್‍ಗೆ ನಂಬಿಸಿದ್ದಾನೆ. ಬಳಿಕ ಸುಮಾರು ಮೂರು ಲಕ್ಷ ಹಣವನ್ನ ಪಡೆದು ಸುಭಾಷ್ ಗೆ ಮಾರಾಟ ಮಾಡಿದ್ದಾನೆ. ಆದ್ರೆ ಇಷ್ಟೆಲ್ಲ ನಡೆದ್ರು ಮೃತ ನರಸಪ್ಪನ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಬೆಟ್ಟದ ಮದ್ಯೆ ಜಮೀನು ಇರೋ ಕಾರಣಕ್ಕೆ ನರಸಪ್ಪನ ಕುಟುಂಬಸ್ಥರು ಉಳುಮೆ ಕೂಡ ಮಾಡದೆ ಪಾಳು ಬಿಟ್ಟಿದ್ದಾರೆ. ಯಾವಾಗ ನಕಲಿ ವ್ಯಕ್ತಿ ಸೃಷ್ಟಿ ಮಾಡಿ ಜಮೀನು ಮಾರಾಟ ಮಾಡಿ ರಿಜಿಸ್ಟರ್ ಮಾಡಿ ಬಳಿಕ ಮುಟೇಷನ್ ವೇಳೆ ಅಧಿಕಾರಿಗಳು ಗ್ರಾಮಕ್ಕೆ ಬಂದ ಮೇಲೆ ಗಂಗಪ್ಪನ ಕಳ್ಳಾಟ ಗೊತ್ತಾಗಿದೆ. ಇನ್ನು ಈ ಆಸ್ತಿ ಮೃತ ನರಸಪ್ಪನಿಗೆ 1955 ರಲ್ಲಿ ಸರ್ಕಾರದಿಂದ ನೀಡಲಾಗಿದೆ. ಆದ್ರೆ ನರಸಪ್ಪ ಸತ್ತ ಮೇಲೆ ಈ ಆಸ್ತಿ ಹಿಂದೆ ಕಳ್ಳರು ಬಿದ್ದಿದ್ದಾರೆ. ಇದನ್ನೂ ಓದಿ: ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಒಣಗ್ತಿರೋ ಬೆಳೆ- ಸರ್ಕಾರದ ವಿರುದ್ಧ ರೈತ ಆಕ್ರೋಶಇನ್ನೂ ಐನಾತಿ ಗಂಗಪ್ಪನ ಕಳ್ಳಾಟ ಬಯಲಾಗ್ತಿದ್ದಂತೆ ನರಸಪ್ಪನ ಕುಟುಂಬಸ್ಥರು ಹೌಹಾರಿದ್ದಾರೆ. ಪೆÇಲೀಸ್ ಠಾಣೆ, ಕಚೇರಿ ಕಚೇರಿ ಅಲೆದಾಡುತ್ತಿದ್ದಾರೆ. ನಕಲಿ ವ್ಯಕ್ತಿಯನ್ನ ಸೃಷ್ಟಿಸಲು ಮಹಾ ಪ್ಲಾನ್ ರೂಪಿಸಿದ ಕಿಲಾಡಿ ಗಂಗಪ್ಪ ಸಿಕ್ಕಿ ಬಿದ್ದಿದೆ ರೋಚಕ ತಿರುವು. ಗ್ರಾಮದಲ್ಲಿ ಯಾರಿಗೂ ಅನುಮಾನ ಬಾರದ ಹಾಗೇ ಹೆಡಗಿಮುದ್ರಾ ಗ್ರಾಮದ ನಕಲಿ ನರಸಪ್ಪ ಎಂಬಾತನನ್ನು ಮಾಡಿ ಗ್ರಾಮದ ಸುಭಾಷ್ ಗೆ 2 ಲಕ್ಷದ 80 ಸಾವಿರಕ್ಕೆ ಆಸ್ತಿ ಮಾರಾಟದ ದಾಖಲೆಗಳನ್ನ ಸಿದ್ದಪಡಿಸಿದ್ದರು. ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಆತನ ಕಳ್ಳಾಟ ಬಯಲಾಗಿದೆ.ಇನ್ನೂ ಈ ಬ್ರೋಕರ್ ಗಂಗಪ್ಪ ಒಂದೇ ಕುಟುಂಬಕ್ಕೇ ಈ ರೀತಿ ವಂಚನೆ ಮಾಡಿಲ್ಲ. ಹತ್ತಾರು ಜನರ ಆಸ್ತಿಯನ್ನ ಅನ್ಯರಿಗೆ ಪರಭಾರೆ ಮಾಡಿಸಿದ್ದಾನೆ ಎಂಬ ಆರೋಪವು ಕೇಳಿ ಬರುತ್ತಿದೆ. ಇನ್ನೂ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೃತ ನರಸಪ್ಪನ ಮೊಮ್ಮಗ ಚಂದ್ರಶೇಖರ್ ಪೆÇಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಯಾದಗಿರಿ ನಗರ ಠಾಣೆಯಲ್ಲಿ ನರಸಪ್ಪನ ಮೊಮ್ಮಗ ಚಂದ್ರಶೇಖರ್ ಆಸ್ತಿ ಕಬಳಿಕೆಗೆ ಯತ್ನಿಸಿದ ಗಂಗಪ್ಪ, ಸುಭಾಷ್, ನರಸಪ್ಪ ಹಾಗೂ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬ್ರೋಕರ್ ಗಂಗಪ್ಪ ಹಾಗೂ ಗ್ಯಾಂಗ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ಇನ್ನು ಗ್ರಾಮದ ಜನರು ಸಹ ಮೃತ ನರಸಪ್ಪನ ಕುಟುಂಬಸ್ಥರ ಜೊತೆಗೆ ನಿಂತಿದ್ದಾರೆ. ಅನ್ಯಾಯಕ್ಕೆ ಒಳಗಾಗಿ ನ್ಯಾಯಕ್ಕಾಗಿ ಅಲೆಯುತ್ತಿರುವ ನರಸಪ್ಪನ ಕುಟುಂಬಸ್ಥರಿಗೆ ನ್ಯಾಯ ಒದಗಿಸಿ ಅಂತ ಮನವಿ ಮಾಡುತ್ತಿದ್ದಾರೆ.ಒಟ್ಟಿನಲ್ಲಿ ಬ್ರೋಕರ್ ಗಂಗಪ್ಪನ ಕಳ್ಳಾಟಕ್ಕೆ ಮೃತ ನರಸಪ್ಪನ ಕುಟುಂವಸ್ಥರು ಕಂಗಾಲಾಗಿದ್ದಾರೆ. ಈ ಬಗ್ಗೆ ಪೆÇಲೀಸರು ತನಿಖೆ ನಡೆಸಿ, ಆರೋಪಿ ಗಂಗಪ್ಪನ ವಿರುದ್ದ ಕಾನೂನು ಕ್ರಮ ಕೈಗೊಳ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


