ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ.ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ ಆಟೋ ಹತ್ತಿ ಕುಳಿತ್ತಿದ್ದಾರೆ. ಆದರೆ ಪತ್ನಿಯನ್ನ ತಡೆಯಲು ರಾಜು ಮುಂದಾಗಿದ್ದು, ತಾನು ಆಟೋ ಹತ್ತಿ ಕುಳಿತ್ತಿದ್ದಾರೆ.ಈ ವೇಳೆ ರಾಜು ವಿನೋದಾ ಧರಿಸಿದ್ದ ಚಿನ್ನದ ಒಡವೆಗಳನ್ನು ಬಿಚ್ಚಿ ಕೊಡುವಂತೆ ಕೇಳಿದ್ದಾರೆ. ಇದರಿಂದ ಕುಪಿತಗೊಂಡ ವಿನೋದಾ ನಡು ಬೀದಿ ಎಂದು ನೋಡದೇ ಪತಿಗೆ ಮನಸೋ ಇಚ್ಛೆ ಬೈದು, ಥಳಿಸಿದ್ದಾರೆ. ಕೊನೆಗೆ ತಾನೇ ಆಟೋದಿಂದ ಇಳಿದು ವಿನೋದಾ ಹೊರಟಿದ್ದಾರೆ. ಅದೇ ಆಟೋ ಹತ್ತಿ ಪತಿ ಅಲ್ಲಿಂದ ಹೋಗಿದ್ದಾರೆ. ಈ ಗಂಡ ಹೆಂಡತಿ ಜಗಳವನ್ನು ಸುತ್ತಾಮುತ್ತಾ ಜನ ನೋಡಿಕೊಂಡು ಸುಮ್ಮನಾಗಿದ್ದಾರೆ.






 Advertisement 




Sign in to your account
Username or Email Address


Password

 Remember Me


