ಮಂಗಳೂರು: 27 ವರ್ಷದ ಯುವಕನೊಬ್ಬ ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಮಗನೆಂದು ಹೇಳಿಕೊಂಡು ಮಂಗಳೂರಿನಲ್ಲಿ ಪ್ರತ್ಯಕ್ಷನಾಗಿದ್ದಾನೆ.ಆಂಧ್ರಪ್ರದೇಶ ಮೂಲದ 27 ವರ್ಷದ ಸಂಗೀತ್ ಕುಮಾರ್ ಪ್ರತ್ಯಕ್ಷಗೊಂಡಿರುವ ಐಶ್ವರ್ಯ ರೈ ಮಗ. ತನ್ನ ತಂದೆ ವಿಶಾಖಪಟ್ಟಣ ಮೂಲದ ಮವುಲು ಆದಿರೆಡ್ಡಿಯಾಗಿದ್ದು ಐಶ್ವರ್ಯಾ ರೈ ನೆರವಿನಿಂದ ಟೆಸ್ಟ್ ಟ್ಯೂಬ್ ಮೂಲಕ ಮಗು ಪಡೆದಿದ್ದರು. ಆರಂಭದ ಎರಡು ವರ್ಷ ಲಂಡನ್ ನಲ್ಲಿ ಐಶ್ವರ್ಯಾ ಕುಟುಂಬದ ಜೊತೆಗೆ ವಾಸಿಸುತ್ತಿದ್ದೆ. ಅನಂತರ ನನ್ನ ತಂದೆ ತನ್ನನ್ನು ಆಂಧ್ರಪ್ರದೇಶಕ್ಕೆ ತಂದು ಸಾಕಿದ್ದಾರೆ ಅಂತ ಹೇಳಿಕೊಂಡಿದ್ದಾನೆ.ಸಂಗೀತ್ ಕುಮಾರ್ ಬಳಿ ತಾನೂ ಐಶ್ವರ್ಯ ಪುತ್ರನೆಂದು ಹೇಳಿಕೊಳ್ಳಲು ಯಾವುದೇ ದಾಖಲೆಗಳಿಲ್ಲ. ಐಶ್ವರ್ಯಾ ಕುಟುಂಬಸ್ಥರು ನನ್ನನ್ನು ನೋಡಿದರೆ ಒಪ್ಪಿಕೊಳ್ಳುತ್ತಾರೆ. ತಾನು ಐಶ್ವರ್ಯಾ ಬಳಿ ಹೋಗಬೇಕು. ತುಳು ಚಿತ್ರವೊಂದರ ಶೂಟಿಂಗ್ ಕಾರ್ಯಕ್ಕೆಂದು ಮಂಗಳೂರಿಗೆ ಬಂದಿದ್ದೇನೆ. ಚೆನ್ನೈ ಯಲ್ಲಿ ಸೌಂಡ್ ಇಂಜಿನಿಯರ್ ಆಗಿದ್ದೇನೆ ಅಂತಾ ಸಂಗೀತ್ ಕುಮಾರ್ ಹೇಳಿಕೊಂಡಿದ್ದಾನೆ.https://www.youtube.com/watch?v=PqFvl8XkaUsSign in to your account
Username or Email Address


Password

 Remember Me


