ಉಡುಪಿ: ಪ್ರವಾಸಕ್ಕೆಂದು ಮಲ್ಪೆ ಬೀಚ್ ಗೆ ಬಂದು ಬಾಲಕನೊಬ್ಬ ಮೃತಪಟ್ಟ ಆಘಾತಕಾರಿ ಘಟನೆಯೊಂದು ನಡೆದಿದೆ.ಮೃತ ದುರ್ದೈವಿ ಬಾಲಕನನ್ನು ಮಂಜುನಾಥ್(14) ಎಂದು ಗುರುತಿಸಲಾಗಿದೆ. ಈತ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಲಿವಣ ಗ್ರಾಮದ ನಿವಾಸಿ ಎಂಬುದಾಗಿ ತಿಳಿದುಬಂದಿದೆ. ಜಿಲ್ಲೆಯ ಶಾಲೆಯೊಂದರಿಂದ ಉಡಪಿಯ ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬೀಚ್ ಬದಿಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕನಿಗೆ ಫಿಟ್ಸ್ ಬಂದು ಏಕಾಏಕಿ ಬಿದ್ದು ಮರಳಲ್ಲಿ ಒದ್ದಾಡಿದ್ದಾನೆ.ಕೂಡಲೇ ಎಚ್ಚೆತ್ತ ಶಿಕ್ಷಕರು ಆತನನ್ನು ಆಸ್ಪತ್ರೆಗೆ ಕೊಂಡೊಯ್ದರಾದ್ರೂ, ಅದಾಗಲೇ ಬಾಲಕ ಮೃತಪಟ್ಟದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕನ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ. ಬಾಲಕನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. Sign in to your account
Username or Email Address


Password

 Remember Me


