ಮಂಡ್ಯ: ಪೆಟ್ರೋಲ್ ಬಂಕ್ ನಲ್ಲಿ ತಾವು ಕೊಟ್ಟ ಹಣಕ್ಕಿಂತ ಕಡಿಮೆ ಪೆಟ್ರೋಲ್ ಹಾಕುತ್ತಿದ್ದಾರೆಂದು ನೂರಾರು ಸಾರ್ವಜನಿಕರು ರಾತ್ರೋರಾತ್ರಿ ಪೆಟ್ರೋಲ್ ಬಂಕ್ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.ನಿಶಾಂಶ್ ಪಟೇಲ್ ಎಂಬ ಯುವಕ ಮಂಡ್ಯದ ಸಂಜಯ ವೃತ್ತದ ಬಳಿಯಿರುವ ಎಚ್‍ಪಿ ಪೆಟ್ರೋಲ್ ಬಂಕ್ ನಲ್ಲಿ 200 ರೂಪಾಯಿ ಕೊಟ್ಟು ಪ್ಲಾಸ್ಟಿಕ್ ಕ್ಯಾನ್ ಗೆ ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಆದರೆ ಕ್ಯಾನ್ ಗೆ ತಾವು ಕೊಟ್ಟ ಹಣಕ್ಕಿಂತ ಸುಮಾರು 200 ಮಿಲಿಲೀಟರ್ ಪೆಟ್ರೋಲ್ ಕಡಿಮೆ ಹಾಕಿದ್ದಾರೆ ಎಂದು ಯುವಕ ಬಂಕ್‍ ನವರನ್ನು ಪ್ರಶ್ನೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಪೆಟ್ರೋಲ್ ಹಾಕಿಸಲು ಬಂದಿದ್ದ ಗ್ರಾಹಕರು ಕೂಡ ಯುವಕನ ಪರವಾಗಿ ಬಂಕ್ ನವರನ್ನು ಪ್ರಶ್ನೆ ಮಾಡಿದ್ದಾರೆ. ಆಗ ಬಂಕ್ ನವರು ಮತ್ತೆ ಪ್ರತ್ಯೇಕವಾಗಿ ಪೆಟ್ರೋಲ್ ಅಳತೆ ಮಾಡಿ ಗ್ರಾಹಕರಿಗೆ ತೋರಿಸಿದ್ದಾರೆ. ಅದರಲ್ಲೂ ಪೆಟ್ರೋಲ್ ಕಡಿಮೆ ಬಂದಿದೆ. ವಿಷಯ ಒಬ್ಬರಿಂದ ಒಬ್ಬರಿಗೆ ಹರಡಿ ನೂರಾರು ಗ್ರಾಹಕರು ಪೆಟ್ರೋಲ್ ಬಂಕ್ ಬಳಿ ಜಮಾಯಿಸಿ ಬಂಕ್ ನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಈ ವೇಳೆ ಬಂಕ್ ನವರು ಮತ್ತು ಗ್ರಾಹಕರ ನಡುವೆ ಜೋರು ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವ ಭರವೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು.Sign in to your account
Username or Email Address


Password

 Remember Me


