ಕೊಪ್ಪಳ: ಗಂಗಾವತಿಯ ಕಲ್ಮಠ ಸ್ವಾಮೀಜಿ ಲೈಂಗಿಕ ಹಗರಣ ಹೊರಬಿದ್ದ ಬಳಿಕ ಎಸ್ಕೇಪ್ ಆಗಿದ್ದ ಸ್ವಾಮೀಜಿ ಮತ್ತೆ ಬುಧವಾರ ಮಠಕ್ಕೆ ಎಂಟ್ರಿ ಕೊಟ್ಟಿದ್ದಾನೆ.ಶಾಸಕ ಇಕ್ಬಾಲ್ ಅನ್ಸಾರಿಯ ಬೆಂಬಲಿಗರೊಂದಿಗೆ ಮಠಕ್ಕೆ ಮತ್ತೆ ಬಂದಿದ್ದಾನೆ. ಈ ವಿಷಯವಾಗಿ ಎರಡು ಗುಂಪಿನ ನಡುವೆ ಸಭೆಯೊಂದರಲ್ಲಿ ಮಾತಿನ ಚಕಮಕಿ ನಡೆದಿದೆ.ಕೊಪ್ಪಳದ ಗಂಗಾವತಿಯ ಕೋಟ್ಟೋರುಶ್ವರ ದೇಗುಲದಲ್ಲಿ ವೀರಶೈವ ಸಮಾಜದ ಮುಖಂಡರು ಸಭೆ ಸೇರಿದ್ದರು. ಕೆಲವರು ಸ್ವಾಮೀಜಿ ವಿಚಾರವಾಗಿ ಮೃದು ಧೋರಣೆ ತಾಳಿದ್ದಾರೆ ಎಂದು ಮಹಾಬಳೇಶ ಹಾಸಿನಾಳ್ ಹೇಳಿದಾಗ ತಾಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಎ ಹಾಲಸಮುದ್ರ ನಡುವೆ ಮಾತಿನ ಚಕಮಕಿ ನಡೆದು ವಿಕೋಪ ಹಂತಕ್ಕೆ ತಲುಪಿತ್ತು.ಸ್ವಾಮೀಜಿ ಮತ್ತೆ ಮಠ ಪ್ರವೇಶಿಸಿಲು ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಕುಮ್ಮಕ್ಕು ಇದೆ ಎನ್ನುವ ಆರೋಪ ಕೇಳಿಬಂದಿದೆ. ಸಭೆ ಬಳಿಕ ಸ್ವಾಮೀಜಿ ಪೀಠದಿಂದ ಕೆಳಗಿಳಿಯಬೇಕೆಂದು ಮುಖಂಡರು ಆಗ್ರಹಿಸಿದ್ದಾರೆ. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿSign in to your account
Username or Email Address


Password

 Remember Me


