ರಾಯಚೂರು: ಇದು ರಾಯಚೂರಿನ ಲಿಂಗಸುಗೂರು ತಾಲೂಕಿನ ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಗುರಮ್ಮನ ಗೂಂಡಾಗಿರಿಯ ಸುದ್ದಿ.ಮಾಹಿತಿ ಹಕ್ಕು ಕಾಯ್ದೆಯಡಿ 2010ರಿಂದ ಇದುವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಉಪಕೇಂದ್ರಕ್ಕೆ ಬಂದ ಅನುದಾನ ಎಷ್ಟು? ಅದನ್ನ ಯಾವುದಕ್ಕೆ ಬಳಸಿದ್ದೀರಿ ಅಂತ ಆರ್‍ಟಿಐ ಕಾರ್ಯಕರ್ತ ಹನುಮಂತ ನಂದಿಹಾಳ ಮಾಹಿತಿ ಕೇಳಿದ್ರು. 45 ದಿವಾದರೂ ಗುರಮ್ಮ ಮಾಹಿತಿ ನೀಡಿರಲಿಲ್ಲ. ಇದರ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ಹನುಮಂತ ಮೇಲ್ಮನವಿ ಸಲ್ಲಿಸಿದ್ದರು.ಮನವಿ ಮೇರೆಗೆ ನಾಲ್ಕು ಜನರ ತನಿಖಾ ತಂಡ ರಚಿಸಿದ್ದ ಡಿಎಚ್‍ಓ ಪರಿಶೀಲನೆಗೆ ಕಳುಹಿಸಿದ್ದರು. ತನಿಖಾ ತಂಡ ಪರಿಶೀಲನೆಗೆ ಬಂದಾಗ ಗುರಮ್ಮ ಆರ್‍ಟಿಐ ಕಾರ್ಯಕರ್ತನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಪಾಳಮೋಕ್ಷ ಮಾಡಿದ್ದಾಳೆ.Sign in to your account
Username or Email Address


Password

 Remember Me


