ತುಮಕೂರು: ಚಲಿಸುತ್ತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡ್ತಿದ್ದ ಯುವಕನ ಕಾಲು ತುಂಡಾದ ಘಟನೆ ತುಮಕೂರಿನ ತಿಪಟೂರು ತಾಲೂಕಿನ ಹೊನ್ನವಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.ಕಾಲು ಕಳೆದುಕೊಂಡ ಯುವಕ 20 ವರ್ಷದ ನರಸಿಂಹ ಎಂದು ತಿಳಿದುಬಂದಿದೆ. ಹುಬ್ಬಳಿಯಿಂದ ಬೆಂಗಳೂರಿಗೆ ಹೋಗ್ತಿದ್ದ ಮಹಾಲಕ್ಷ್ಮಿ ರೈಲಿಗೆ ಸಿಲುಕಿದ ಪರಿಣಾಮ ನರಸಿಂಹ ಅವರ ಬಲಗಾಲು ಮೊಣಕಾಲಿನವರೆಗೆ ಸಂಪೂರ್ಣ ತುಂಡಾಗಿದೆ. ಎಡಗಾಲು ಕೂಡ ಗಾಯಗೊಂಡಿದೆ.ಗಾಯಾಳು ನರಸಿಂಹರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಗೆ ರವಾನಿಸಲಾಗಿದೆ.Sign in to your account
Username or Email Address


Password

 Remember Me


