ತುಮಕೂರು: ಮದ್ಯವ್ಯಸನಿ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಘಟನೆ ತುಮಕೂರು ಜಿಲ್ಲೆ ಶಿರಾದ ತಾವರೆಕೆರೆಯಲ್ಲಿ ನಡೆದಿದೆ.ಘಟನೆಯಲ್ಲಿ 9 ವರ್ಷದ ವಿದ್ಯಾ, 5 ವರ್ಷದ ಭವ್ಯಾ ಮೃತಪಟ್ಟಿದ್ದಾರೆ. ತಾಯಿ ಸುಹಾಸಿನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪತಿ ನಾಗೇಶ್ ಮದ್ಯವ್ಯಸನಿಯಾಗಿದ್ದು, ತೀವ್ರ ಕಿರುಕುಳ ನೀಡುತಿದ್ದ ಎನ್ನಲಾಗಿದೆ.ನಾಗೇಶ್ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಅವರ ಪೋಷಣೆ ಕಷ್ಟವಾಗಿತ್ತು. ಇದರಿಂದ ನೊಂದ ಸುಹಾಸಿನಿ ಪತಿ ಹಾಗೂ ಮೊದಲ ಮಗಳು ಸಂಧ್ಯಾ ಮನೆಯಲ್ಲಿಲ್ಲದ ವಿಷ ಕುಡಿದು ಮಕ್ಕಳಿಗೂ ವಿಷ ಉಣಿಸಿದ್ದಾರೆ.ತಕ್ಷಣ ವಿಷ ಸೇವಿಸಿದ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮಕ್ಕಳು ತಡರಾತ್ರಿ ಅಸುನೀಗಿದ್ದಾರೆ.ಸದ್ಯ ತಾಯಿ ಸುಹಾಸಿನಿ ಸ್ಥಿತಿ ಗಂಭೀರವಾಗಿದೆ.Sign in to your account
Username or Email Address


Password

 Remember Me


