ಬೆಳಗಾವಿ: ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಜಾನುವಾರುಗಳು ಸಜೀವ ದಹನವಾದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.ಎಮ್ಮೆ, ಆಕಳು, ಆಡು ಸೇರಿದಂತೆ ಸುಮಾರು 5 ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ. ದತ್ತಾ ಸೂರ್ಯವಂಶಿ ಎಂಬವರಿಗೆ ಸೇರಿದ ಜಾನುವಾರುಗಳು ಇವಾಗಿವೆ. ಸೋಮವಾರ ರಾತ್ರಿ ಸಮಯದಲ್ಲಿ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು. ತೋಟದಲ್ಲಿ ಪ್ರದೇಶದಲ್ಲಿ ದನದ ಕೊಟ್ಟಿಗೆ ಇರುವುದರಿಂದ ಘಟನೆ ಯಾರಿಗೂ ತಿಳುದುಬಂದಿಲ್ಲ. ಹೀಗಾಗಿ ಮೂಕಪ್ರಾಣಿಗಳು ಸಾವನ್ನಪ್ಪಿವೆ.ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.Sign in to your account
Username or Email Address


Password

 Remember Me


