ಬೆಂಗಳೂರು: ಪ್ರೀತಿ ಮಾಯೆ ಹುಷಾರು ಅಂತಾ ಹೇಳುತ್ತಾರೆ. ಆದರೂ ಕೆಲ ಮುಗ್ಧ ಹುಡುಗಿಯರನ್ನು ಮೋಸ ಮಾಡಲೆಂದು ಕೆಲವರು ಪ್ರೀತಿ ಎಂಬ ಮುಖವಾಡವನ್ನು ಧರಿಸುತ್ತಾರೆ. ಇದೇ ರೀತಿಯಾದ ಲವ್ ದೋಖಾ ಪ್ರಕರಣವೊಂದು ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ವಿನೋದ್ ಎಂಬಾತನೇ ಯುವತಿ ಮತ್ತು ಅಪ್ರಾಪ್ತ ಬಾಲಕಿಗೆ ಮೋಸ ಮಾಡಿದ ಕಾಮುಕ. ವಿನೋದ್ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಯುವತಿಯರಿಗೆ ಮೋಸ ಮಾಡಿದ್ದಾನೆ. ಇತ್ತೀಚೆಗೆ ಥಣಿಸಂದ್ರ ನಿವಾಸಿಯಾಗಿರುವ ಆಶಾ (ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ.ಆಶಾ ಪೋಷಕರು ಮೂಲತಃ ಪಶ್ಚಿಮ ಬಂಗಾಳದ ನಿವಾಸಿಗಳು. ಬೆಂಗಳೂರು ನಗರಕ್ಕೆ ಬಂದು ಸುಮಾರು 10 ವರ್ಷಗಳಾಗಿದ್ದು, ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದಾರೆ. ಆಶಾ ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ವಿನೋದ್ ಬಾಲಕಿಯ ಎದುರು ಮನೆಯಲ್ಲಿ ವಾಸವಾಗಿದ್ದನು. ಮನೆಯಲ್ಲಿ ಪೋಷಕರು ಯಾರೂ ಇಲ್ಲದ ವೇಳೆ ಆಶಾಳೊಂದಿಗೆ ಮಾತನಾಡುತ್ತಿದ್ದನು. ಈ ಸಂಬಂಧ ಆಶಾ ಪೋಷಕರು ವಿನೋದನಿಗೆ ಮನೆಯತ್ತ ಬರಕೂಡದು ಎಂದು ಎಚ್ಚರಿಸಿದ್ದರು.ಡಿಸೆಂಬರ್ 02ರಂದು ಆಶಾ ಶಾಲೆಗೆ ಹೋಗದೇ ಮನೆಯಲ್ಲಿದ್ದಳು. ಪೋಷಕರು ಎಂದಿನಂತೆ ತಮ್ಮ ಕೆಲಸಕ್ಕೆ ತೆರಳಿದ ವೇಳೆ ವಿನೋದ್ ಬಾಲಕಿಯನ್ನು ಕರೆದುಕೊಂಡು ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಆಶಾ ಪೋಷಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವಿನೋದನ ಪತ್ತೆಗೆ ವಿಶೇಷ ಜಾಲ ಬೀಸಿದ್ದಾರೆ.






 Advertisement 




Sign in to your account
Username or Email Address


Password

 Remember Me


