ಚಿಕ್ಕಮಗಳೂರು: ಕಾರು ಹರಿದ ಪರಿಣಾಮ ಪಾದಚಾರಿಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ನಗರದ ರಾಮನಹಳ್ಳಿಯಲ್ಲಿ ನಡೆದಿದೆ.65 ವರ್ಷದ ಹಾಲಪ್ಪ ಮೃತ ದುರ್ದೈವಿ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಮಾಡಿದ ಕಾರು ಚಾಲಕ ಕಾರನ್ನ ನಿಲ್ಲಿಸದೇ ಹೋಗುತ್ತಿದ್ದ. ಕೂಡಲೇ ಸ್ಥಳೀಯರು ಕಾರನ್ನ ಫಾಲೋ ಮಾಡಿ ಅಡ್ಡಗಟ್ಟಿ ಕಾರು ಚಾಲಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೆ ಆಕ್ರೋಶಕ್ಕೊಳಗಾದ ಸ್ಥಳೀಯರು ಕಾರಿನ ಗಾಜನ್ನ ಪುಡಿ ಮಾಡಿದ್ದಾರೆ.ಈ ಬಗ್ಗೆ ರಾಮನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


