ಬೆಂಗಳೂರು: ಅವತ್ತು ಇಡೀ ಮನೆ ಮದುವೆಯ ಸಂಭ್ರಮದಲ್ಲಿತ್ತು. ಮದುವೆ ಮನೆಯ ಹೊರಗಡೆ ಪುಂಡ ಪೋಕರಿಗಳ ಬೈಕ್ ಸದ್ದು ಕೇಳಿ ಬಂತು. ಯಾರದು ಅಂತ ನೋಡೋದಕ್ಕೆ ಹೋದ ವ್ಯಕ್ತಿಯನ್ನು ಕೊಲೆ ಮಾಡಿಬಿಟ್ರು.ಇತ್ತೀಚೆಗೆ ನಗರದ ಡಿಜೆ ಹಳ್ಳಿಯ ಮದುವೆ ಮನೆಯಲ್ಲೇ ಕೊಲೆ ನಡೆದಿತ್ತು. ಮದುವೆ ಮನೆಗೆ ಬಂದಿದ್ದ ಇಬ್ಬರು ಕಿರಾಕತರು ಮಧುಮಗನ ತಮ್ಮ ರಿಜ್ವಾನ್ ಹೆಣ ಉರುಳಿಸಿದ್ರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಚೋಟಾ ಶಾಹೀದ್ ಮತ್ತು ಚನ್ನೈ ಶಾಹಿದ್‍ನನ್ನು ಬೆನ್ನತ್ತಿ ಬಲೆಗೆ ಬೀಳಿಸಿದ್ರು. ಆದ್ರೆ ಕೊಲೆಗೆ ಕಾರಣ ಕೇಳಿದ ಪೊಲೀಸರಿಗೆ ಶಾಕ್ ಆಗಿತ್ತು.ಅಂದು ನಡೆದಿದ್ದೇನು?: ಗುರುವಾರ ರಿಜ್ವಾನ್ ಅಣ್ಣನ ಮೆಹೆಂದಿ ಕಾರ್ಯಕ್ರಮ ನಡೆಯುತ್ತಿತ್ತು. ಅಂದು ಮದುವೆ ಮನೆಗೆ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಡ್ರ್ಯಾಗರ್ ನಿಂದು ಇರಿದು ರಿಜ್ವಾನ್ ನ ಕೊಲೆ ಮಾಡಿ ಪರಾರಿಯಾಗಿದ್ದರು. ಕೂಡಲೇ ರಿಜ್ವಾನ್ ರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.ರಿಜ್ವಾನ್ ಯಾವಾಗಲೂ ನಮ್ಮನ್ನು ಗುರಾಯಿಸುತ್ತಿದ್ದನು. ಆದ್ದರಿಂದ ಅಂದು ನಾವು ರಿಜ್ವಾನ್ ಕೊಲೆ ಮಾಡಿದ್ದೇವೆ ಎಂದು ಪೊಲೀಸರ ಮುಂದೆ ಆರೋಪಿಗಳು ತಿಳಿಸಿದ್ದಾರೆ. ಏರಿಯಾದಲ್ಲಿ ಹವಾ ಇಡ್ಬೇಕು ಅಂತ ಏನೇನೋ ಮಾಡಿದ್ದ ಹುಡುಗರು ಕೊನೆಗೆ ಕೊಲೆ ಮಾಡಿ ಜೈಲು ಸೇರಿದ್ದು ದುರಂತವೇ ಸರಿ.Sign in to your account
Username or Email Address


Password

 Remember Me


