ತುಮಕೂರು: ರಾಹುಲ್ ಗಾಂಧಿ ಕಾಲ್ಗುಣ ಚೆನ್ನಾಗಿದೆ. ಅವರನ್ನು ಕಾಂಗ್ರೆಸ್ ನವರು ಕರೆಯೋದು ಬೇಡ, ನಾವೇ ಕರೀತಿವಿ. ಯಾಕಂದ್ರೆ ರಾಹುಲ್ ಗಾಂಧಿ ಕಾಲಿಟ್ಟಲೆಲ್ಲ ಕಾಂಗ್ರೆಸನ್ನ ಫೆನಾಯಿಲ್ ಹಾಕಿ ತೊಳೆಯೋದು ಎಂದರ್ಥ ಎಂದು ಮಾಜಿ ಡಿಸಿಎಂ ಆರ್. ಆಶೋಕ್ ವ್ಯಂಗ್ಯವಾಡಿದ್ದಾರೆ.ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಕಟುಕಿದ ಪರಿ ಇದು. ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಪಕ್ಷ ಗುಡಿಸಿ ಗುಂಡಾಂತರ ಆಗ್ತಾ ಇದೆ. ಇದು ಬಿಜೆಪಿಗೆ ಲಾಭ. ಹಾಗಾಗಿ ನಾವೇ ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಕರೀತಿವಿ. ಅವರೇ ಸ್ವತಃ ಕರ್ನಾಟಕದಲ್ಲಿ ಕಾಂಗ್ರೆಸನ್ನು ಫಿನಾಯಲ್ ಹಾಕಿ ತೊಳೆಯಲಿ ಎಂದು ವ್ಯಂಗ್ಯವಾಡಿದ್ರು.ಅಲ್ಲದೆ 10 ವರ್ಷಗಳ ಕಾಲ ಪ್ರಧಾನಮಂತ್ರಿಯಾದ ಮನಮೋಹನ್ ಸಿಂಗ್ ತುಟಿಕ್ ಪಿಟಿಕ್ ಅಂತಿರಲಿಲ್ಲ. ಹಾಗಾಗಿಯೇ ಚೀನಾ, ಪಾಕಿಸ್ತಾನ ಎಲ್ಲಾ ನೆರೆಯ ದೇಶದವರು ನಮ್ಮ ಮೇಲೆ ಅಕ್ರಮಣ ಮಾಡಿದ್ರು. ಈಗ ನೋಡಿ ಎಲ್ಲಾ ವೈರಿ ರಾಷ್ಟ್ರಗಳು ಬಾಲ ಮುದುಡಿ ಕುಂತಿವೆ. ಇದು ನಮ್ಮ ಪ್ರಧಾನಿಯವರ ತಾಕತ್ತು ಎಂದು ಆರ್. ಆಶೋಕ್ ಹೇಳಿದ್ರು.Sign in to your account
Username or Email Address


Password

 Remember Me


