ಮಂಗಳೂರು: ಮದುವೆಗೆ ಎರಡು ದಿನ ಇರುವಾಗ ಲವ್ ಜಿಹಾದ್ ಗೆ ಒಳಗಾಗಿ ಅನ್ಯಕೋಮಿನ ಯುವಕನ ಜೊತೆಗೆ ಪರಾರಿಯಾಗಿದ್ದ ಮೂಡುಬಿದಿರೆಯ ಯುವತಿ ಈಗ ಜೈಲು ಸೇರಿದ್ದಾಳೆ.ಮಂಗಳೂರಿನ ಪಣಂಬೂರು ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೋಡಿಯನ್ನು ಮುಂಬೈನಲ್ಲಿ ವಶಕ್ಕೆ ಪಡೆದು ಕರೆತಂದಿದ್ದು, ಕೋರ್ಟಿಗೆ ಹಾಜರುಪಡಿಸಿದ್ದಾರೆ.ಇದನ್ನೂ ಓದಿ: ಫಾರಿನ್ ಹುಡ್ಗನ ಜೊತೆ ಹಸೆಮಣೆ ಏರಬೇಕಿದ್ದ ನವ ವಧು ಜೂಟ್ಪ್ರಿಯಾಂಕ ಮನೆಯವರಿಗೆ ಅಮಲು ಪದಾರ್ಥ ನೀಡಿ ನಾಪತ್ತೆಯಾಗಿದ್ದಳು ಎಂದು ಮೂಡುಬಿದಿರೆ ಠಾಣೆಯಲ್ಲಿ ಆಕೆಯ ತಾಯಿ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣ ದಾಖಲಾಗಿದ್ದು ಕೋರ್ಟ್, ಯುವತಿಗೆ ಡಿ.26 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಮದುವೆಯಾಗಿ ಗಂಡನ ಮನೆ ಸೇರಬೇಕಿದ್ದ ಯುವತಿ ಈಗ ಜೈಲು ಸೇರಿದ್ದಾಳೆ. ಆದರೆ ಆಕೆಯನ್ನು ಕರೆದೊಯ್ದಿದ್ದ ಪ್ರಿಯಕರ ಫರಂಗಿಪೇಟೆಯ ಹೈದರ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಹಿಂದೂ ಸಂಘಟನೆಗಳು ಯುವತಿ ನಾಪತ್ತೆ ವಿಚಾರವನ್ನು ಲವ್ ಜಿಹಾದ್ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದವು. ಡಿ.11 ಕ್ಕೆ ಪ್ರಿಯಾಂಕ ಮದುವೆ ಕುಂದಾಪುರ ಮೂಲದ ಯುವಕನ ಜೊತೆ ನಿಗದಿಯಾಗಿತ್ತು. ಆದರೆ ಎರಡು ದಿನ ಮುನ್ನ ಡಿ.9ರಂದು ನಡೆದ ಮೆಹಂದಿ ಶಾಸ್ತ್ರದ ರಾತ್ರಿ ಯುವತಿ ನಾಪತ್ತೆಯಾಗಿದ್ದು ಮನೆಯವರನ್ನು ಆತಂಕಕ್ಕೀಡುಮಾಡಿತ್ತು.Sign in to your account
Username or Email Address


Password

 Remember Me


