ಬೆಂಗಳೂರು: ಅವರೆಲ್ಲಾ ಡಾಕ್ಟರ್ ಆಗ್ಬೇಕು, ಜನರ ರೋಗವನ್ನು ಕಡಿಮೆ ಮಾಡ್ಬೇಕು ಅಂತೆಲ್ಲಾ ಸಾಗರದಾಚೆಗೆ ಹಾರಿ ಹೋದ್ರು. ಹೀಗೆ ಹಾರಿದವರು ಕಾಲೇಜನ್ನು ಸೇರಲಿಲ್ಲ. ಬದಲಿಗೆ ಒಂದು ಹೋಟೆಲನ್ನು ಸೇರಿದ್ರು. ಬಳಿಕ ಆ ಹೊಟೇಲನ್ನೇ ಕಾಲೇಜು ಮಾಡಿಕೊಂಡು ದ್ರೋಹ ಮಾಡಿದ ಕಿಡಿಗೇಡಿಗಳು ಕೋಟಿ ಕೋಟಿ ದೋಚಿದ್ರು.ಹೌದು. ಕಡಿಮೆ ಹಣಕ್ಕೆ ಅಮೆರಿಕಗೆ ಹೋಗಿ ವೈದ್ಯಕೀಯ ವಿದ್ಯೆಯನ್ನು ಕಲಿಯಬಹುದು. ನೀವು ಕೂಡ ಡಾಕ್ಟರ್ ಆಗ್ಬಹುದು ಅಂತ ಸಿಕ್ಕ ಸಿಕ್ಕ ಜನರಿಗೆಲ್ಲಾ ಮಂಕು ಬೂದಿಯನ್ನು ಎರಚುತ್ತಾ ಇರೋ ಅಲೆಗ್ಸಾಂಡರ್ ಯೂನಿವರ್ಸಿಟಿಯ ಬಯಲಾಟ ಇದೀಗ ಅನಾವರಣವಾಗ್ತಿದೆ.ನಗರದ ಸುರೇಶ್ ಎಂಬವರು ತನ್ನ ಮಗಳು ಅಮೆರಿಕದಲ್ಲಿ ಡಾಕ್ಟರ್ ಆಗಬೇಕೆಂಬ ಆಸೆಯಿಂದ ಅಲೆಗ್ಸಾಂಡರ್ ಯೂನಿವರ್ಸಿಟಿಗೆ ಹೋಗಿ ಲಕ್ಷ ಲಕ್ಷ ಹಣವನ್ನು ಕಟ್ಟಿದ್ದಾರೆ. ಆದ್ರೆ ಒಂದು ವರ್ಷಕ್ಕೆ 15 ಲಕ್ಷ ಹಣವನ್ನು ಕಟ್ಟುವಂತೆ ಡೀಲ್ ಮಾಡಿದ್ದ ಅಲೆಗ್ಸಾಂಡರ್ ಯೂನಿವರ್ಸಿಟಿ, ಮಕ್ಕಳನ್ನು ಅಮೆರಿಕಗೆ ಕಳುಹಿಸೋದನ್ನ ಬಿಟ್ಟು ಒಂದು ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿ ಕೋರಮಂಗಲದಲ್ಲಿಯೇ ಇರಿಸಿಕೊಂಡಿದ್ದಾರೆ. ಯಾವಾಗ ಪೋಷಕರೆಲ್ಲಾ ಗಲಾಟೆ ಮಾಡೋದಕ್ಕೆ ಶುರು ಮಾಡಿದ್ರೋ, ಆ ಸಂದರ್ಭದಲ್ಲಿ ಎಚ್ಚೆತ್ತ ಯೂನಿರ್ವಸಿಟಿಯವರು ಅಮೆರಿಕಗೆ ಕಳಿಸ್ತೀನಿ ಅಂತ ಬರಬೋಡಾಸ್‍ಗೆ ಕಳುಹಿಸಿದ್ದಾರೆ.ಈ ವೇಳೆ ಯುವಿರ್ವಸಿಟಿಯ ಮತ್ತೊಂದು ಮುಖ ಬಯಲಾಗಿದೆ. ಅಮೆರಿಕಗೆ ಹೋಗ್ತಾ ಇದ್ದೀವಿ ಅಂತ ಭ್ರಮೆಯಲ್ಲಿ ಕೂತಿದ್ದ ಮಕ್ಕಳನ್ನು ಬರಬೋಡಾಸ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಒಂದು ಹೋಟೆಲ್‍ನಲ್ಲಿ ಇರಿಸಿ ಒಂದು ಹಾಸ್ಟೆಲ್‍ನಂತೆ ಮಾಡಿದ್ದಾರೆ. ಇದ್ರಿಂದ ಕೋಪಗೊಂಡ ವಿದ್ಯಾರ್ಥಿಗಳು ಅಲ್ಲಿ ವಿಚಾರ ಮಾಡೋದಕ್ಕೆ ಹೋದ್ರೆ. ನಿಮಗೆ ಸರ್ಟಿಫಿಕೇಟ್ ಬೇಕು ಅಂದ್ರೆ ಕೊಡಿಸ್ತೀವಿ ಯಾಕೆ ಯೋಚ್ನೆ ಮಾಡ್ತಿರಾ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಪಾಠವನ್ನೇ ಕಲಿಯೋದಕ್ಕೆ ಅವಕಾಶ ಇಲ್ವಲ್ಲ ಅಂದ್ರೆ ನಿಮ್ಮ ಹಣ ವಾಪಸ್ಸು ಕೊಡ್ತೀವಿ ಅಂತ ವಿದ್ಯಾರ್ಥಿನಿಯರನ್ನೆಲ್ಲಾ ವಾಪಸ್ ಕರ್ನಾಟಕಕ್ಕೆ ಕಳುಹಿಸಿದ್ದಾರೆ. ನಮ್ಮ ಮಕ್ಕಳು ಓದೋದು ಬೇಡ ನೀವು ಮೋಸ ಮಾಡಿದ್ದೀರಿ ನಮ್ಮ ಹಣ ವಾಪಸ್ಸು ಕೊಡಿ ಅಂದಿದಕ್ಕೆ 15 ಲಕ್ಷದ ಬದಲು ಕೇವಲ ಐದು ಲಕ್ಷ ಹಣವನ್ನು ವಾಪಸ್ ಕೊಟ್ಟು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.ಒಟ್ಟಿನಲ್ಲಿ ದೂರದ ದೇಶಕ್ಕೆ ಹೋಗಿ ಓದ್ತೀವಿ, ಡಾಕ್ಟರ್ ಆಗ್ತೀವಿ ಅಂದುಕೊಂಡಿದ್ದ ಎಷ್ಟೋ ಮಕ್ಕಳ ಕನಸು ಸಾಗರದಲ್ಲೇ ಕಮರಿ ಹೋಗಿದ್ದು, ಅತ್ತ ಹಣವೂ ಇಲ್ಲದೇ, ಇತ್ತ ವಿದ್ಯಾಭ್ಯಾಸವೂ ಇಲ್ಲದೇ ಒದ್ದಾಡುವಂತೆ ಆಗಿದೆ. ಶಿಕ್ಷಣದ ಹೆಸರಲ್ಲಿ ವ್ಯಾಪಾರದ ಜೊತೆ ಮೋಸ ಮಾಡ್ತಿರೋ ಸಂಸ್ಥೆಗಳ ಮೇಲೆ ಇದೀಗ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.Sign in to your account
Username or Email Address


Password

 Remember Me


