ಬಳ್ಳಾರಿ: ಅಂಜನಿಪುತ್ರ ಚಿತ್ರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ನಾಯಕ ನಟ ಪುನೀತ್ ರಾಜಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ಅಂಜನಿಪುತ್ರ ಚಿತ್ರದ ವಿರುದ್ಧವಾಗಿ ಯಾರು ಕೇಸ್ ಹಾಕಿದ್ದಾರೋ ಅವರ ಬಳಿ ಹೋಗಿ ಕೇಳಿ. ತಡೆಯಾಜ್ಞೆಗೆ ನಿರ್ಮಾಪಕ ಉತ್ತರ ನೀಡಲಿದ್ದಾರೆ. ಈ ಕುರಿತು ಈಗಾಗಲೇ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಬಗ್ಗೆ ಏನೂ ಮಾತನಾಡಲಾರೆ ಅಂದಿದ್ದಾರೆ.ಹೊಸಪೇಟೆ ಜೊತೆ ನಮ್ಮ ಕುಟುಂಬದ ಸಂಬಂಧ ಹೆಚ್ಚಾಗುತ್ತಿದೆ. ಟಗರು ಆಡಿಯೋ ಬಿಡುಗಡೆ ಸಮಾರಂಭ ಸಕ್ಸಸ್ ಆಗಿರುವುದು ಖುಷಿ ತಂದಿದೆ ಅಂದ್ರು. ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ.ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  Sign in to your account
Username or Email Address


Password

 Remember Me


