ಕೊಪ್ಪಳ: ಸಿದ್ದರಾಮಯ್ಯನವರ ಬಳಿ ಮೂಲ ಕಾಂಗ್ರೆಸ್ ರಕ್ತ ಇಲ್ಲ. ಸಿದ್ದರಾಮಯ್ಯ ಹಿಟ್ಲರ್ ಇದ್ದ ಹಾಗೆ ಅಂತ ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀನಾಥ್ ವಾಗ್ದಾಳಿ ನಡೆಸಿದ್ರು.ಗಂಗಾವತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಪತ್ರ ರವಾನಿಸಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಇಂದಿರಾಗಾಂಧಿ ಕಾಲದಿಂದ ನಮ್ಮ ಮನೆಯಲ್ಲಿ ಕಾಂಗ್ರೆಸ್ ಕೆಲಸ ಆರಂಭವಾಗುತ್ತಿತ್ತು. ಆದ್ರೆ ಸಿದ್ದರಾಮಯ್ಯ ಮೂಲ ಕಾಂಗ್ರೆಸಿಗರ ಮೇಲೆ ದರ್ಪ ತೋರಿಸುತ್ತಿದ್ದಾರೆ ಅಂದ್ರು.ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಪಕ್ಷ ಹೈಜಾಕ್ ಆಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಆಡಳಿತ ನಡೆಯುತ್ತಿದೆ ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ನಾಲ್ಕು ವರ್ಷದಿಂದ ಮೂಲ ಕಾಂಗ್ರೆಸ್‍ಗೆ ಅನ್ಯಾಯವಾಗಿದೆ. ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಅನ್ಸಾರಿ ಮುಂದೆ ನಮ್ಮ ಜೊತೆ ಇರ್ತಾರೆ ಎಂದು ಘೋಷಣೆ ಮಾಡಿದ್ರು.ಸಿದ್ದರಾಮಯ್ಯ ನಿಲುವಿನಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ಜಿಪಂ ಸದಸ್ಯರು, ನಗರಸಭೆ ಸದಸ್ಯರು, ತಾಪಂ ಸದಸ್ಯ ರೊಂದಿಗೆ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಕ್ಕೆ ಗುಡ್ ಬೈ ಹೇಳಿದ್ರು. Sign in to your account
Username or Email Address


Password

 Remember Me


