ಮಂಗಳೂರು: ನಗರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಮಂಗಳೂರಿನ ಮುಲ್ಕಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.ಮುಲ್ಕಿಯ ಪಡು ಪಣಂಬೂರಿನಲ್ಲಿ ಘಟನೆ ನಡೆದಿದ್ದು, ಮುಲ್ಕಿ ನಗರ ಪಂಚಾಯತ್ ಗುತ್ತಿಗೆದಾರ ನಾಗರಾಜ್ ಎಂಬವರ ಮನೆಗೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಮೂರು ಸುತ್ತು ಗುಂಡು ಹಾರಿಸಿದ್ದಾರೆ.ಮನೆ ಬಾಗಿಲು ಮತ್ತು ಕಾರಿಗೆ ಗುಂಡೇಟು ಬಿದ್ದಿದ್ದು ಯಾವುದೇ ಗಾಯಗಳಾಗಿಲ್ಲ. ಹಫ್ತಾಕ್ಕಾಗಿ ಭೂಗತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಬೆದರಿಸುವ ತಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.ಮುಲ್ಕಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಡಿ.8ರಂದು ರಾತ್ರಿ ಮಂಗಳೂರು ನಗರದ ರಥಬೀದಿಯ ಸಂಜೀವ ಶೆಟ್ಟಿ ಬಟ್ಟೆ ಮಳಿಗೆಗೆ ಗುಂಡಿನ ದಾಳಿ ನಡೆದಿತ್ತು. ಇದೀಗ ಅದೇ ಮಾದರಿಯಲ್ಲಿ ಗುತ್ತಿಗೆದಾರನೊಬ್ಬನ ಮನೆಗೆ ದಾಳಿ ನಡೆದಿದ್ದು ಪೊಲೀಸರ ಭಯ ಇಲ್ಲದಂತಾಗಿದೆ.Sign in to your account
Username or Email Address


Password

 Remember Me


