ಬೆಂಗಳೂರು: ಬಂಡೆ ಸಿಡಿಸುವ ಸಿಡಿಮದ್ದು ಸ್ಪೋಟಗೊಂಡು ಸಾಕು ನಾಯಿಯೊಂದು ಸಾವನಪ್ಪಿರುವ ಘಟನೆ ಸಂಭವಿಸಿದೆ.ಈ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಚಿಕ್ಕಮಾರಹಳ್ಳಿಯಲ್ಲಿ ಶನಿವಾರ ತಡ ರಾತ್ರಿ ನಡೆದಿದೆ. ಸಿಡಿಮದ್ದಿನ ಸ್ಫೋಟಕ್ಕೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಇನ್ನೂ ಗ್ರಾಮದ ಆಂಜನಮೂರ್ತಿ ಎಂಬವರಿಗೆ ಸೇರಿದ್ದ ನಾಯಿ ಮೃತಪಟ್ಟಿದೆ. ದುಷ್ಕರ್ಮಿಗಳು ಕೋಳಿ ಮಾಂಸದಲ್ಲಿ ಸ್ಪೋಟಕವನ್ನ ಇಟ್ಟಿದ್ದಾರೆ ಎನ್ನಲಾಗಿದೆ.ಹೀಗೆ ಇಟ್ಟ ಕೋಳಿ ಮಾಂಸವನ್ನು ತಿನ್ನಲು ಹೋದಾಗ ಅದು ಸ್ಫೋಟಗೊಂಡು ನಾಯಿ ಸ್ಥಳದಲ್ಲೇ ಮೃತಪಟ್ಟಿದೆ. ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Sign in to your account
Username or Email Address


Password

 Remember Me


