ಬೆಂಗಳೂರು: ರಾಮನಗರ (Ramanagar) ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡೋ ಚರ್ಚೆ ಆಗುತ್ತಿದೆ. ಡಿಕೆ ಶಿವಕುಮಾರ್ (D.K Shivakumar) ಅವರು ಇದನ್ನೇ ಹೇಳಿದ್ದಾರೆ. ಕನಕಪುರವನ್ನ (Kanakapura) ಬೆಂಗಳೂರಿಗೆ ಸೇರಿಸಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋ ಪ್ಲ್ಯಾನ್ ಇದೆ ಎಂದು ಶಾಸಕ ಎಚ್.ಸಿ ಬಾಲಕೃಷ್ಣ (MLA HC Balakrishna) ತಿಳಿಸಿದ್ದಾರೆ.ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಡಿಕೆಶಿ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸುತ್ತೇವೆ ಅನ್ನೋದು ಅಲ್ಲ. ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ನೇಮ್ ಇದೆ. ಮೊದಲು ನಮ್ಮದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಂತ ಇತ್ತು. ಅದೇ ಬೆಂಗಳೂರು ಅನ್ನೋ ಹೆಸರನ್ನ ಇಟ್ಟುಕೊಂಡ್ರೆ ನಮ್ಮನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುತ್ತಾರೆ. ಹೀಗಾಗಿ ಅದನ್ನ ಬದಲಾವಣೆ ಮಾಡಬೇಕು ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕನಕಪುರವನ್ನ ಬೆಂಗಳೂರಿಗೆ ಸೇರಿಸೋಕೆ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಮನಗರ ಇಬ್ಭಾಗ, ಬೆಂಗಳೂರಿಗೆ ಕನಕಪುರ – ಏನಿದು ಡಿಕೆಶಿ ಲೆಕ್ಕಾಚಾರ?ಕುಮಾರಸ್ವಾಮಿ ಹೇಳಿಕೆಗೆ ಬೆಲೆ ಕೊಡೋ ಅವಶ್ಯಕತೆ ಇಲ್ಲ. ಅವರು ಹತಾಶೆಯಿಂದ ಮಾತಾಡ್ತಿದ್ದಾರೆ. ನಾವು ಶಾಸಕರಾಗಿರೋದು ಕುಮಾರಸ್ವಾಮಿಗೆ ಇಷ್ಟ ಇಲ್ಲ. ಹೀಗಾಗಿ ಕುಮಾರಸ್ವಾಮಿ ಮಾತಿಗೆ ಬೆಲೆ ಕೊಡಬೇಕಿಲ್ಲ. ಕನಕಪುರದಲ್ಲಿ ಕುಮಾರಸ್ವಾಮಿ ಆಸ್ತಿ ಇಲ್ಲ. ಕುಮಾರಸ್ವಾಮಿ ಸತ್ಯ ಹರಿಶ್ಚಂದ್ರ ಅಲ್ಲ ಎಂದು ಹೆಚ್‍ಡಿಕೆ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.ರಾಮನಗರ ಜಿಲ್ಲೆಯನ್ನೇ ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ನಾಮಕರಣ ಮಾಡ್ತೀವಿ. ಈಗ ಸಾರ್ವಜನಿಕ ಚರ್ಚೆಗೆ ಬಿಟ್ಟಿದ್ದಾರೆ. ಸಾರ್ವಜನಿಕರು ಹೇಳಿದಂತೆ ಮುಂದೆ ಮಾಡ್ತೀವಿ. ಕುಮಾರಸ್ವಾಮಿಗೆ ನಮ್ಮನ್ನು ಕಂಡ್ರೆ ಆಗಲ್ಲ. ನಾವು ಕರಿ ಕಾಗೆ ಅಂದ್ರೆ ಅವರು ಬಿಳಿ ಕಾಗೆ ಅಂತಾರೆ. ಅವರು ನಾವು ಏನೇ ಮಾತಾಡಿದ್ರು ವಿರೋಧ ಮಾಡ್ತಾರೆ. ಇದಕ್ಕೆ ನಾವು ಬೆಲೆ ಕೊಡೊ ಅವಶ್ಯಕತೆ ಇಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಮಾಡೋಕೆ ನಾವೇ ಒತ್ತಡ ಮಾಡಿದ್ವಿ. ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡೋಕೆ ನಮ್ಮ ಒಪ್ಪಿಗೆ ಇದೆ ಎಂದರು.ಒಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಬೇಕು ಅನ್ನೋದು ಈಗ ಚರ್ಚೆಗೆ ಬಿಟ್ಟಿದ್ದಾರೆ. ಚರ್ಚೆ ಆಗಲಿ, ಸಾರ್ವಜನಿಕರು ಏನ್ ಅಭಿಪ್ರಾಯ ಕೊಡ್ತಾರೋ ಅದರ ಮೇಲೆ ಮುಂದಿನ ತೀರ್ಮಾನ ಆಗುತ್ತವೆ.Web Stories






















Actress Jyothi Rai New Photo Shoot 










ಹಾಟ್‌ ಲುಕ್‌ನಲ್ಲಿ ನಟಿ ನಭಾ ನಟೇಶ್ 










ಹಾಟ್ ಫೋಟೋಶೂಟ್ ಮಾಡಿ ಪಡ್ಡೆಹುಡುಗರ ನಿದ್ದಕದ್ದ ಶರಣ್ಯಾ 










ಮಾದಕ ಲುಕ್‌ನಲ್ಲಿ ಪಡ್ಡೆಹುಡುಗರ ನಿದ್ದೆಕದ್ದ ನಟಿ ಪೂನಂ 
































ಬಾಲಿವುಡ್‌ ನಟಿ ದಿಶಾ ಪಟಾನಿ ಹಾಟ್‌ ಪೋಟೋಗಳು 










ಪಡ್ಡೆ ಹುಡುಗ್ರ ಹಾರ್ಟ್‌ಗೆ ಮಾಲಿವುಡ್ ಬ್ಯೂಟಿಯ ಹಾಟ್ ಡೋಸ್‌! 


















Sign in to your account
Username or Email Address


Password

 Remember Me


