ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡ ಅವರ ಕುರಿತಾದ `ಸಾಧನೆಯ ಶಿಖರಾರೋಹಣ’ ಎಂಬ ಪುಸ್ತಕ ಇಂದು ಬಿಡುಗಡೆಯಾಗುತ್ತಿದೆ.ಪುಸ್ತಕ ಬಿಡುಗಡೆಗಾಗಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಸುಪ್ರೀಂಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.ಡಾ.ಪ್ರಧಾನ್ ಗುರುದತ್ತ, ಡಾ.ಸಿ.ನಾಗಣ್ಣ ಅವರು ಬರೆದಿರುವ ಪುಸ್ತಕ ಇದಾಗಿದ್ದು, ಪ್ರಧಾನ ಮಂತ್ರಿಯಾಗಿ ದೇವೇಗೌಡ ಅವರು ಮಾಡಿರುವ ಸಾಧನೆಗಳು, ಮುಖ್ಯಮಂತ್ರಿಯಾಗಿದ್ದಾಗ ನಡೆದಿದ್ದ ಷಡ್ಯಂತ್ರಗಳು ಸೇರಿದಂತೆ ಹಲವು ಮಜಲುಗಳು ಈ ಪುಸ್ತಕದಲ್ಲಿ ಅಡಕವಾಗಿದೆ.ಇನ್ನು ಈ ಪುಸ್ತಕದಲ್ಲಿ ರಾಮಕೃಷ್ಣ ಹೆಗಡೆ ಬಗ್ಗೆಯೂ ಪ್ರಸ್ತಾಪ ಮಾಡಲಾಗಿದ್ದು, ಅವರಿಗೆ ಪಾದರಕ್ಷೆಯಲ್ಲಿ ಹೊಡೆತ ಬಿದ್ದಿದ್ದು, ಈ ವೇಳೆ ಬೊಮ್ಮಾಯಿಯವರಿಗೆ ಪೆಟ್ಟಾದ ವಿಷಯ ಉಲ್ಲೇಖ ಮಾಡಲಾಗಿದೆ. ಅಷ್ಟೇ ಅಲ್ಲದೇ ಎರಡು ದಿನಗಳ ಹಿಂದೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಹೆಗಡೆ, ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದು, ಇದಕ್ಕೆ ಜನ ರೊಚ್ಚಿಗೆದ್ದಿದ್ದರ ಬಗ್ಗೆಯೂ ಪುಸ್ತಕದಲ್ಲಿ ಪ್ರಸ್ತಾಪ ಮಾಡಲಾಗಿದೆ ಎಂದು ತಿಳಿದುಬಂದಿದೆ.






 Advertisement 




Sign in to your account
Username or Email Address


Password

 Remember Me


