ತುಮಕೂರು: ಕೊರಟಗೆರೆ, ಕುಣಿಗಲ್ ನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಟ್ಟು ಶಿಕ್ಷಕಕರು ಅಮಾನತಾದ ಘಟನೆ ಮಾಸುವ ಮುನ್ನವೇ ತುಮಕೂರು ನಗರದಲ್ಲಿ ಇಂತಹದ್ದೆ ಘಟನೆ ನಡೆದಿದೆ. ಕ್ಯಾತಸಂದ್ರದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ ತನ್ನ ಕಚೇರಿಯ ಪ್ರಥಮ ದರ್ಜೆ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅನುಕಂಪದ ಆಧಾರದ ಮೇಲೆ ಎಫ್‍ಡಿಎ ಆಗಿ ಕೆಲಸಕ್ಕೆ ಸೇರಿದ ಮಹಿಳಾ ಸಿಬ್ಬಂದಿಗೆ ಶಿಕ್ಷಕ ಶಿವಣ್ಣ ಪೋಲಿ ಮಾತುಗಳನ್ನಾಡಿ ಹಾಸಿಗೆಗೆ ಕರೆದಿದ್ದಾನೆ. ಕೆಲಸ ಹೇಳಿ ಕೊಡೋ ನೆಪದಲ್ಲಿ ಏಕಾಂತದಲ್ಲಿ ಮಹಿಳಾ ಸಿಬ್ಬಂದಿಯನ್ನು ಕಚೇರಿಗೆ ಕರೆಸಿಕೊಂಡು ಆಕೆಯ ಅಂಗಾಂಗಗಳ ವರ್ಣನೆ ಮಾಡುತ್ತಿದ್ದ. ನನ್ನ ಜೊತೆ ಸಹಕರಿಸು, ಎಲ್ಲ ಕೆಲಸವನ್ನೂ ನಿನಗೆ ಕಲಿಸಿ ಕೊಡುತ್ತೇನೆ ಎಂದು ಆಮೀಷ ಒಡ್ಡುತ್ತಿದ್ದ ಎಂದು ಆರೋಪಿಸಲಾಗಿದೆ.ಮುಖ್ಯ ಶಕ್ಷಕ ಶಿವಣ್ಣನ ಕಾಟ ಮಿತಿ ಮೀರಿದಾಗ ಸಂತ್ರಸ್ತೆ ಒಂದು ದಿನ ಕಪಾಳ ಮೋಕ್ಷ ಮಾಡಿದ್ದಾರೆ. ಆದ್ರೂ ಹೆಡ್ ಮಾಸ್ಟರ್ ತನ್ನ ಚೇಷ್ಟೆ ನಿಲ್ಲಿಸಲಿಲ್ಲ. ಇದರಿಂದ ಸಂತ್ರಸ್ತ ಮಹಿಳೆ ಡಿಡಿಪಿಐ ಹಾಗೂ ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪರಿಣಾಮ ಈಗ ಮುಖ್ಯ ಶಿಕ್ಷಕ ಶಿವಣ್ಣ ಅಮಾನತುಗೊಂಡಿದ್ದಾನೆ.Sign in to your account
Username or Email Address


Password

 Remember Me


