ರಾಯಚೂರು: ಇಲ್ಲಿನ ಚಿಕ್ಕಸುಗೂರು ಕ್ರಾಸ್ ಬಳಿ ಚಲಿಸುತ್ತಿದ್ದ ಮಾರುತಿ ವ್ಯಾಗನಾರ್ ಕಾರು ಏಕಾಏಕಿ ಹೊತ್ತಿ ಉರಿದಿದೆ.ಅದೃಷ್ಟವಶಾತ್ ವಾಹನದಲ್ಲಿದ್ದ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಜಳ್ಳಿ ಗ್ರಾಮದ ಬಾಷಾ ಎನ್ನುವರಿಗೆ ಸೇರಿದ ವಾಹನ ಅಗ್ನಿ ಅವಘಡದಿಂದ ಸಂಪೂರ್ಣ ಭಸ್ಮವಾಗಿದೆ.ರಾಯಚೂರಿನಿಂದ ಶಕ್ತಿನಗರ ಕಡೆಗೆ ಹೊರಟಿದ್ದ ವಾಹನ ಚಲಿಸುತ್ತಿದ್ದಾಗಲೇ ಪೆಟ್ರೋಲ್ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನ ಅರಿತು ವಾಹನದಲ್ಲಿದ್ದ ನಾಲ್ವರು ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡು ರಸ್ತೆಯಲ್ಲೆ ಕಾರು ಹೊತ್ತಿ ಉರಿದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.ಘಟನೆ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Sign in to your account
Username or Email Address


Password

 Remember Me


