ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಸಿನಿಮಾವನ್ನು ಒಂದು ಘಂಟೆಗೂ ಹೆಚ್ಚು ಕಾಲ ಫೇಸ್ ಬುಕ್ ಲೈವ್ ಮಾಡಿದ್ದ ನಿತೀಶ್ ತನ್ನ ತಪ್ಪನ್ನು ಒಪ್ಪಿಕೊಂಡು ಪುನೀತ್ ಅಭಿಮಾನಿಗಲ್ಲಿ ಕ್ಷಮೆ ಕೇಳಿದ್ದಾರೆ.ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ನಿತೀಶ್, ಚಿತ್ರದ ಲೈವ್ ಮಾಡಿದ್ದು ನಾನಲ್ಲ, ಹಲವು ದಿನಗಳ ಹಿಂದೆ ನನ್ನ ಸ್ನೇಹಿತನ ಮೊಬೈಲ್‍ನಲ್ಲಿ ನಾನು ಫೇಸ್ ಬುಕ್ ಖಾತೆ ತೆರೆದಿದ್ದೆ. ಅದನ್ನು ನನ್ನ ಸ್ನೇಹಿತ ಬಳಕೆ ಮಾಡುತ್ತಿದ್ದ. ಆದರೆ ಇಂದು ಆತ ಈ ರೀತಿ ಲೈವ್ ಮಾಡಿರುವುದು ನನಗೂ ಬೇಸರ ತರಿಸಿದೆ. ತಕ್ಷಣ ಈ ವಿಡಿಯೋವನ್ನು ಫೇಸ್ ಬುಕ್ ಖಾತೆಯಿಂದ ಡಿಲಿಟ್ ಮಾಡಿಸಿರುವುದಾಗಿ ತಿಳಿಸಿದ್ದಾರೆ.ಚಿತ್ರದ ಲೈವ್ ಮಾಡುವ ಸಂದರ್ಭದಲ್ಲಿ ನಾನು ಸ್ಥಳದಲ್ಲೇ ಇದ್ದೆ. ಆದರೆ ಈ ರೀತಿ ಲೈವ್ ಮಾಡಿರುವುದು ನಮ್ಮ ತಪ್ಪು. ಅಭಿಮಾನಿಗಳಿಗೆ ಇದರಿಂದ ತುಂಬ ನೋವಾಗಿದೆ. ನಮ್ಮ ತಪ್ಪು ತಿಳಿದಿದ್ದೇವೆ ಇನ್ನು ಮುಂದೆ ಎಂದು ಈ ರೀತಿ ನಡೆಯುವುದಿಲ್ಲ. ರಾಜ್ಯದ ಎಲ್ಲಾ ಪುನೀತ್ ಅಭಿಮಾನಿಗಳು ಹಾಗೂ ಚಿತ್ರ ತಂಡದವರ ಜೊತೆ ಕ್ಷಮೆ ಕೇಳುತ್ತೇವೆ ಎಂದರು.ಏನಿದು ಘಟನೆ: ಬೆಂಗಳೂರಿನ ಯಲಹಂಕ ಮೂಲದ ನಿತೀಶ್ ಆತನ ನಾಲ್ಕು ಸ್ನೇಹಿತರು ಸೇರಿ ಈ ಕೃತ್ಯ ಎಸಗಿದ್ದಾರೆ. ಇಂದು ಯಲಹಂಕ ಉಲ್ಲಾಸ ಚಿತ್ರಮಂದಿರ ಬೆಳಗ್ಗಿನ ಷೋ ನಲ್ಲಿ ಬರೋಬ್ಬರಿ 1 ಗಂಟೆ 10 ನಿಮಿಷ ಅವಧಿ ಅಧಿಕ ಹೊತ್ತು ಸಿನಿಮಾವನ್ನು ಲೈವ್ ತೋರಿಸಿದ್ದಾರೆ. ಈ ಸಂಬಂಧ ಚಿತ್ರತಂಡ ನಿತೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಸಿದ್ಧತೆ ನಡೆಸುತ್ತಿದೆ.https://www.youtube.com/watch?v=8UvhKPPU2xo Sign in to your account
Username or Email Address


Password

 Remember Me


