ಬೆಂಗಳೂರು: ಶಾಲೆಗೆ ನುಗ್ಗಿ ಮುಖ್ಯ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿದ್ದ ಹಿನ್ನಲೆಯಲ್ಲಿ ಇದೀಗ ರಾಜಾನಕುಂಟೆ ಪೊಲೀಸರು ಬಿಜೆಪಿ ಮುಖಂಡ ಬಡ್ಡಿ ರಾಮಕೃಷ್ಣನನ್ನು ಬಂಧಿಸಿದ್ದಾರೆ.ತಿಮ್ಮನಾಯಕನಹಳ್ಳಿ ನಿವಾಸಿಯಾಗಿರುವ ರಾಮಕೃಷ್ಣಪ್ಪ ನಾಲ್ಕು ದಿನಗಳ ಹಿಂದೆ ಸಿಂಗನಾಯಕನಹಳ್ಳಿ ಆರ್ಯನ್ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿಗೆ ಥಳಿಸಿದ್ದ. ಯಲಹಂಕದ ಖಾಸಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಆಶಾ, ರಾಮಕೃಷ್ಣಪ್ಪ ಬಳಿ ಸಾಲ ಪಡೆದಿದ್ದರು. ಸಾಲದ ಬಡ್ಡಿ ಹಣವನ್ನು ಪಡೆಯಲು ಶಾಲೆಗೆ ನುಗ್ಗಿದ ರಾಮಕೃಷ್ಣಪ್ಪ ಮಹಿಳೆ ಎಂದು ನೋಡದೇ ಕಪಾಳಮೋಕ್ಷ ಮಾಡಿದ್ದ. ಈ ಎಲ್ಲ ದೃಶ್ಯಾವಳಿಗಳು ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಈ ಸಂಬಂಧ ಹಲ್ಲೆಗೊಳಗಾದ ಮುಖ್ಯ ಶಿಕ್ಷಕಿ ರಾಮಕೃಷ್ಣಪ್ಪ ವಿರುದ್ಧ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಇಂದು ರಾಮಕೃಷ್ಣನನ್ನು ಪೊಲೀಸರು ಬಂಧಿಸಿದ್ದಾರೆ.https://www.youtube.com/watch?v=4pCMERtCS1QSign in to your account
Username or Email Address


Password

 Remember Me


