ಚಿತ್ರದುರ್ಗ: ನೀರಿನ ತೊಟ್ಟಿಗೆ ಬಿದ್ದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಳ್ಳಕೆರೆಯ ಗಾಂಧಿನಗರದಲ್ಲಿ ನಡೆದಿದೆ.ಗಾಂಧಿನಗರದ ಜಗನಾಥ್ ಮತ್ತು ಚಂದ್ರಿಕಾ ದಂಪತಿಯ 2 ವರ್ಷದ ಬಾಲಕ ಸೋನು ಮೃತ ದುರ್ದೈವಿ. ಇಂದು ಮುಂಜಾನೆ ಮನೆ ಅಂಗಳದಲ್ಲಿ ಆಟವಾಡುತ್ತಿತ್ತು. ಆದರೆ ಆಕಸ್ಮಿಕವಾಗಿ ಮಗು ನೀರಿನ ತೊಟ್ಟಿಗೆ ಬಿದ್ದಿದೆ.ಪೋಷಕರು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ಕಾಣುತಿಲ್ಲ ಎಂದು ಹುಡುಕಿದಾಗ ತೊಟ್ಟಿಗೆ ಬಿದ್ದಿರುವುದು ತಿಳಿದಿದೆ. ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.  ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!ಈ ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.  ಇದನ್ನೂ ಓದಿ : ಆಟವಾಡುವ ವೇಳೆ ನೀರು ತುಂಬಿದ್ದ ಪಾತ್ರೆಗೆ ಬಿದ್ದು 8 ತಿಂಗಳ ಮಗು ಸಾವುSign in to your account
Username or Email Address


Password

 Remember Me


