ಚಿಕ್ಕಮಗಳೂರು: ದೇವಸ್ಥಾನದಲ್ಲಿ ದೇವರಿಗೆ ವಾಮಾಚಾರ ಮಾಡಿ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಇಲ್ಲಿನ ಇಂದಾವರ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಕಳ್ಳರು ದೇವಾಲಯದ ಸುತ್ತ ದಿಗ್ಬಂಧನ ಮಾಡಿ, ದೇವರ ಮೂರ್ತಿಯನ್ನು ತಂತಿಯಿಂದ ಸುತ್ತಿದ್ದಾರೆ. ದೇವಸ್ಥಾನದದಲ್ಲಿ ವಾಮಾಚಾರಕ್ಕೆ ಬಳಸಲಾಗಿರುವ ನಿಂಬೆಹಣ್ಣು, ಅರಿಶಿಣ, ಕುಂಕುಮ ಪತ್ತೆಯಾಗಿವೆ.ಕಳ್ಳರು ದೇವರ ಬೆಳ್ಳಿ ವಿಗ್ರಹ ಸೇರಿ ಇತರೆ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿದೆ. Sign in to your account
Username or Email Address


Password

 Remember Me


