ತುಮಕೂರು: ಚುನಾವಣೆ ಸಮಿಪಿಸುತ್ತಿದ್ದಂತೆ ಸ್ಪರ್ಧಿಗಳು ಒಬ್ಬರನೊಬ್ಬರು ಹಣಿಯಲು ಆರಂಭಿಸುವುದು ಹೊಸದೇನಲ್ಲ. ತುಮಕೂರಿನಲ್ಲಿ ತುಸು ವಿಶೇಷವಾಗಿ ರಾಜಕಾರಣಿಗಳು ತಮ್ಮ ವಿರೋಧಿಗಳ ಕಾಲು ಎಳೆಯಲು ಪ್ರಯತ್ನಿಸಿದ್ದಾರೆ.ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ವಿಡಂಬನಾತ್ಮಕ ಹಾಡು ರಚಿಸಿ ಫೇಸ್ ಬುಕ್ ನಲ್ಲಿ ಅಪಲೋಡ್ ಮಾಡಲಾಗಿದೆ. ತುಮಕೂರು ಗ್ರಾಮಾಂತರ ಯೂತ್ ಕಾಂಗ್ರೆಸ್ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಸುಳ್ಳೇ ಸುಳ್ಳು ಎಂಬ ಹಾಡಿನೊಂದಿಗೆ ಸುರೇಶ್ ಗೌಡರು ಮಾಡಿರುವ ಕೆಲ ತಪ್ಪುಗಳನ್ನು ವಿಡಂಬನಾತ್ಮಕವಾಗಿ ಹೇಳಲಾಗಿದೆ.ಆಪರೇಷನ್ ಕಮಲದ ವೇಳೆ ಗುಬ್ಬಿ ಜೆಡಿಎಸ್ ಶಾಸಕರಿಗೆ 25 ಕೋಟಿ ಆಫರ್ ಇಟ್ಟಿದ್ದ ಸರದಾರ, ಕಾರು ಡಿಕ್ಕಿ ಮಾಡಿ ವೃದ್ಧನ ಕೊಂದ ಕಿಲ್ಲರ್, ಬೆಂಗಳೂರಲ್ಲಿ ಸ್ವಂತ ಮನೆ ಇದ್ದರೂ ಜಿ-ಕೆಟಗರಿ ಸೈಟ್ ಗಾಗಿ ಹಪಹಪಿಸುವ ಆಸೆಬರುಕ, ತನ್ನ ಕಾರು ಬಿಡದ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ರೌಡಿ ಶಾಸಕ….. ಹೀಗೆ ವಿಡಂಬನಾತ್ಮಕವಾಗಿ ಹಾಡು ಬರೆಯಲಾಗಿದೆ.Sign in to your account
Username or Email Address


Password

 Remember Me


