ಬೆಂಗಳೂರು: ವಿಧಾನಸಭಾ ಚುನಾವಣೆಯ ಹೊತ್ತಲ್ಲೇ ಬಿಜೆಪಿ ಸಿಎಂ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಿನಿಮಾ ಶಾಕ್ ಸಿಕ್ಕಿದೆ. ಮಾಜಿ ಡಿಸಿಎಂ ಈಶ್ವರಪ್ಪ ಆಪ್ತ ವಿನಯ್, ಬಿಎಸ್‍ವೈ ವಿರುದ್ಧವೇ ಸಿನಿಮಾ ಮಾಡಲು ಹೊರಟಿದ್ದಾರೆ.`ಮೂರೂ ಬಿಟ್ಟುವರು ದೇವರಿಗೆ ದೊಡ್ಡವರು’ ಎಂಬ ಟೈಟಲ್ ಸಿನಿಮಾ ಇರಿಸಲಾಗಿದ್ದು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಿತ್ರದ ಟೈಟಲ್ ರಿಜಿಸ್ಟರ್ ಆಗಿದೆ. ಶೋಭಾ ಪಾಲಿಟಿಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.ತೆರೆ ಮೇಲೆ ವಿನಯ್ ಹೀರೋ ಆಗಿ ಮಿಂಚಲಿದ್ದರೆ, ರಾಯಚೂರಪ್ಪ ಪಾತ್ರಕ್ಕೆ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಬಣ್ಣ ಹಚ್ಚೋ ಸಾಧ್ಯತೆಯಿದೆ ಎನ್ನಲಾಗಿದೆ. ಕವಿ ರಾಜೇಶ್, ಮಾರುತಿ ಜಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.ಕಥಾ ನಾಯಕ ವಿನಯ್ ರಾಜಕೀಯ ನಾಯಕನ ಜೊತೆ ಕೆಲ್ಸ ಮಾಡ್ಕೊಂಡಿರುತ್ತಾನೆ. ಆದ್ರೆ ಆ ವ್ಯಕ್ತಿ ದೊಡ್ಡ ನಾಯಕನಾಗಿ ಬೆಳೀತಾನೆ ಅಂತಾ ಕೊಲೆಗೆ ಸಂಚು ರೂಪಿಸ್ತಾರೆ. ಅಪಾಯದಿಂದ ಪಾರಾದ ಹೀರೋ ತನ್ನ ಎದುರಾಳಿ ರಾಜಕಾರಣಿಗಳನ್ನು ರಾಜಕೀಯದಿಂದಲೇ ನಿವೃತ್ತಿಯಾಗುವಂತೆ ಮಾಡ್ತಾನೆ ಅನ್ನೋದು ಕಥೆ.ಇನ್ನೊಂದು ವಾರದಲ್ಲಿ ಈ ಸಿನಿಮಾದ ಫಸ್ಟ್‍ಲುಕ್ ರಿಲೀಸ್ ಆಗಲಿದೆ ಎಂಬುವುದಾಗಿ ಮೂಲಗಳಿಂದ ತಿಳಿದುಬಂದಿದೆ.Sign in to your account
Username or Email Address


Password

 Remember Me


