ಬೆಂಗಳೂರು: ಹೊಸ ವರ್ಷ ಆಚರಣೆಗೆ ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಬೆಂಗಳೂರಿಗೆ ಬರುವ ಕುರಿತು ನಗರದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ ಹಿನ್ನೆಲೆಯಲ್ಲಿ ಸ್ವತಃ ಸನ್ನಿ ನಾನು ಬರಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ‘ಸನ್ನಿ ನೈಟ್ಸ್’ಗಾಗಿ ಹೈ ಕೋರ್ಟ್ ಮೊರೆಹೋದ ಆಯೋಜಕರುಕರವೇ ಸಂಘಟನೆ ವಿರೋಧ ವ್ಯಕ್ತಪಡಿಸಿದ್ರಿಂದ ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಸನ್ನಿ ಕಾರ್ಯಕ್ರಮಕ್ಕೆ ಪರ್ಮಿಷನ್ ಕೊಡಬಾರದು ಅಂತಾ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶದ ಬೆನ್ನಲ್ಲೇ ಸನ್ನಿ ಕೂಡ ಪ್ರತಿಕ್ರಿಯಿಸಿದ್ದಾರೆ. ನನ್ನ ಕಾರ್ಯಕ್ರಮ ನೋಡೋಕೆ ಬಂದ ಫ್ಯಾನ್ಸ್ ಗಳಿಗೆ ಏನೂ ಆಗಬಾರದು. ಅವರ ಸೇಫ್ಟಿ ಮುಖ್ಯ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತಾ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: `ಸನ್ನಿ ನೈಟ್ಸ್’ ವಿರುದ್ಧ ಪೊರಕೆ ಹಿಡಿದ ಬೆಂಗ್ಳೂರು ಮಹಿಳೆಯರುಟ್ವೀಟ್ ನಲ್ಲಿ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಕಾರ್ಯಕ್ರಮಕ್ಕೆ ನನಗೆ ಹಾಗೂ ನನ್ನ ಕಾರ್ಯಕ್ರಮ ನೋಡಲು ಭಾಗವಹಿಸುವವರಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಈಗಾಗಲೇ ತಿಳಿಸಿದ್ದಾರೆ. ನನಗೆ ಸುರಕ್ಷತೆ ಮುಖ್ಯವಾಗಿರುವ ಕಾರಣ ನಾನು ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ. ದೇವರು ಒಳ್ಳೆಯದನ್ನು ಮಾಡಲಿ. ನಾನು ಎಲ್ಲರ ಸುರಕ್ಷತೆಯನ್ನು ಹಾರೈಸುತ್ತೇನೆ. ಹೊಸ ವರ್ಷದ ಶುಭಾಶಯಗಳು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಸೀರೆ ಉಟ್ಕೊಂಡು ಬರಲಿ- `ಸನ್ನಿ ನೈಟ್ಸ್’ ಆಯೋಜಕರಿಗೆ ಕರವೇ ಸವಾಲುಸದ್ಯ ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಸರ್ಕಾರದ ನಿಲುವಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ನಡೆಯನ್ನ ಕೋರ್ಟ್ ಹೇಗೆ ನೋಡುತ್ತದೆ ಎಂಬ ಕುತೂಹಲ ಹುಟ್ಟಿದೆ.Sign in to your account
Username or Email Address


Password

 Remember Me


