ಬೆಂಗಳೂರು: ಮಧ್ಯರಾತ್ರಿಯಲ್ಲಿ ಮಾಜಿ ಶಾಸಕರ ಪುತ್ರನ ಅವಾಂತರ ನಡೆದಿದೆ. ಕುಡಿದ ಅಮಲಿನಲ್ಲಿ ಮುಂದಿನ ಎಂಎಲ್‍ಎ ಅಭ್ಯರ್ಥಿ ಎಂದು ಪೊಲೀಸರಿಗೆ ಅವಾಜ್ ಹಾಕಿ ಸ್ಟೇಷನ್ ಮೆಟ್ಟಿಲೇರಿದ್ದಾರೆ.ಉಡುಪಿ ಮಾಜಿ ಶಾಸಕ ಜಯರಾಮ ಶೆಟ್ಟಿ ಪುತ್ರ ರತನ್ ಶೆಟ್ಟಿ ಮಂಗಳವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಡಿಡಿ ಚೆಕ್ ಮಾಡುತ್ತಿದ್ದ ಪೊಲೀಸರು ರತನ್ ಶೆಟ್ಟಿ ಇದ್ದ ಕಾರು ಚಾಲಕನನ್ನ ಡ್ರಂಕ್ & ಡ್ರೈವ್ ತಪಾಸಣೆ ನಡೆಸಿದ್ದರು.ಈ ವೇಳೆ ರತನ್ ಶೆಟ್ಟಿ ತಾನು ಮುಂದಿನ ಎಂಎಲ್‍ಎ ಅಭ್ಯರ್ಥಿ. ನನ್ನನ್ನೇ ತಡೆಯುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರತನ್ ನಡುವೆ ಮಾತಿನ ಚಕಮಕಿಯಾಗಿದೆ. ಪೊಲೀಸರು ರತನ್‍ ರನ್ನ ವಶಕ್ಕೆ ಪಡೆದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.ನಂತರ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಇತ್ತ ರತನ್ ಶೆಟ್ಟಿ ಸಹ ಪೊಲೀಸರು ತನ್ನನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ನಂತರ ರತನ್ ಗೆ ಕುಡಿದ ಅಮಲಿನಲಿನಿಂದ ಆದ ಎಡವಡ್ಡು ಅರಿವಾಗಿದೆ. ಇದೀಗ ಕ್ಷಮಾಪಣೆ ಪತ್ರ ಬರೆದು ಕೊಟ್ಟು ವಾಪಸ್ ಹೋಗಿದ್ದಾರೆ.Sign in to your account
Username or Email Address


Password

 Remember Me


