ಬೆಂಗಳೂರು: ಗುಜರಾತ್‍ನಲ್ಲಿ ಕಾಂಗ್ರೆಸ್ ಸೋತರೂ ಸಿಎಂ ಮೊಗದಲ್ಲಿ ಮಂದಹಾಸ ಮೂಡಿತ್ತು. ಕಾಂಗ್ರೆಸ್ ಸೋತರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಕ್ಕಿದ್ದೇಕೆ ಗೊತ್ತಾ? ಸಿದ್ದರಾಮಯ್ಯ ನಗುವಿಗೂ ಗುಜರಾತ್ ಫಲಿತಾಂಶಕ್ಕೂ ಸಂಬಂಧವಿದೆ.ಮತ ಎಣಿಕೆಗೆ ಒಂದು ಗಂಟೆ ಮುನ್ನವೇ ಸಿದ್ದರಾಮಯ್ಯ ಫಲಿತಾಂಶದ `ಲೆಕ್ಕಾಚಾರ’ ಹೇಳಿದ್ರು. ಆಪ್ತರ ಬಳಿ ಸಿಎಂ ಸಿದ್ದರಾಮಯ್ಯ ಗುಜರಾತ್ ಫಲಿತಾಂಶದ ಕುರಿತು ಏನು ಹೇಳಿಕೊಂಡಿದ್ರು ಅನ್ನೋ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಿಎಂ ಹೇಳಿದಂತೆಯೇ ಗುಜರಾತ್ ಫಲಿತಾಂಶ ಬಂದಿರೋದು ಸಿದ್ದರಾಮಯ್ಯ ಮಂದಹಾಸದ ಮರ್ಮ.ದಿನಾಂಕ: 18-12-2017, ಸಮಯ: ಬೆಳಗ್ಗೆ 7 ಗಂಟೆ, ಸ್ಥಳ: ಸಿಎಂ ನಿವಾಸಸಿಎಂ ಸಿದ್ದರಾಮಯ್ಯ: ಎಷ್ಟು ಬಂದದೋ ಗುಜರಾತ್‍ನಲ್ಲಿ.. ಏನ್ ನೂರು ದಾಟಬಿಟ್ಟಾರಾ..?
ಆಪ್ತ1: ಅಯ್ಯೋ.. ಎಲ್ಲಾ ನೂರಿಪ್ಪತ್ತು ಅಂತಾರಲ್ಲಣ್ಣೋ..?
ಸಿಎಂ ಸಿದ್ದರಾಮಯ್ಯ: ಅಯ್ಯಾ.. ಏನ್ ಹೇಳ್‍ಬಿಟ್ ತಕ್ಷಣ.. ಆಗ್ಬುಟ್ಟದಾ.. ಮಿಸಿನ್ ಓಪನ್ ಮಾಡುದ್ರೆ ತಾನೆ ಗೊತ್ತಾಗೋದಾ..
ಆಪ್ತ2: ಅದು ಸರೀನೆ.. ಸಮೀಕ್ಷೆಗಳು ನಿಜ ಆಗಲ್ಲ.. 10 ಗಂಟೆಗೆ ಎಲ್ಲಾ ಗೊತ್ತಾಗ್ದಣ್ಣೋ
ಸಿಎಂ ಸಿದ್ದರಾಮಯ್ಯ: ನೂರು ಒಳಗೆ ಬಿಜೆಪಿದು ಬರ್ಲಿ.. ಇಲ್ಲಿ ನೋಡೋಣಾ
ಸಿಎಂ ಸಿದ್ದರಾಮಯ್ಯ: ಗುಜರಾತ್‍ನಲ್ಲಿ 80 ಸೀಟ್ ಬಂದ್ರೂ ಸಾಕು ನಮ್ಗೆ.. ಇಲ್ಲಿ ನಾವು ಗೆದ್ದಂಗೆ.. ಶಾ ಬಂದ್ರೂ ಆಗಲ್ಲ… ಮೋದಿ ಬಂದ್ರೂ ಆಗಲ್ಲ ಬುಡ್ರಲಾ..
ಆಪ್ತ1: ಅವರು ಅಂಗೆ ಅಂತಾರೆ.. ಬಿಜೆಪಿಯವರೇ ಕಷ್ಟ ಅಂತಾ.. ನಾವು ಏನು ಹೆದ್ರಂಗೆ ಇಲ್ಲ ಬುಡಣ್ಣೋ…ಸಿಎಂ ಸಿದ್ದರಾಮಯ್ಯ ಅಂದಾಜಿಸಿದಂತೆಯೇ ಗುಜರಾತ್‍ನಲ್ಲಿ ಬಿಜೆಪಿ ನೂರರೊಳಗೆ ನಿಲ್ತು. ಕಾಂಗ್ರೆಸ್ 80ರ ಆಜುಬಾಜು ಬಂದು ನಿಲ್ತು. ಹೀಗಾಗಿ ಸಿದ್ದರಾಮಯ್ಯ ಮೊಗದಲ್ಲಿ ಮಂದಹಾಸ ಮೂಡಿತ್ತು.


















 Advertisement 




Sign in to your account
Username or Email Address


Password

 Remember Me


