ಬಳ್ಳಾರಿ: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮಂಗಳವಾರ ಮೇಲೆ ಹಾರದ ಪರಿಣಾಮ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ತೋರಣಗಲ್ ನಲ್ಲಿ ನಡೆಯಿತು.ಸಿಎಂ ಸಿದ್ದರಾಮಯ್ಯ ತೋರಣಗಲ್ ನಿಂದ ಬಾಗಲಕೋಟೆಗೆ ಹೆಲಿಕಾಪ್ಟರ್ ಮೂಲಕ ತೆರಳುತ್ತಿದ್ದರು. ಈ ವೇಳೆ ಸಿಎಂ ಹೆಲಿಕಾಪ್ಟರ್ ಹತ್ತಿದ ನಂತರ ಟೇಕ್ ಆಫ್ ಆಗಲು ವಿಳಂಬವಾಯ್ತು. ಅಲ್ಲದೇ ಹೆಲಿಕಾಪ್ಟರ್ ಟೇಕ್ ಆಫ್ ಆದ ಜಾಗದಿಂದ ಮುಂದೆ ಹೋಗಿ ನಿಂತು ಕೆಲ ಕಾಲ ನಿಂತ ಜಾಗದಲ್ಲೆ ಇತ್ತು. ಅಲ್ಲದೇ ಲ್ಯಾಂಡ್ ಆಗುವ ಸ್ಥಿತಿಯಲ್ಲಿ ಕಂಡು ಬಂದಿತು.ಐದು ನಿಮಿಷಗಳ ನಂತರ ಟೇಕ್ ಆಫ್ ಆಗಿ ಹಾರಾಟ ಮುಂದುವರೆಯಿತು. ಸೋಮವಾರ ಸಹ ಯಾದಗಿರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಗೆ ಇಂಧನ ಕೊರತೆಯಿಂದಾಗಿ ಗಂಟೆಗಟ್ಟಲೆ ತಡವಾಗಿ ಪ್ರಯಾಣ ಆರಂಭವಾಗಿತ್ತು. Sign in to your account
Username or Email Address


Password

 Remember Me


