ಪ್ಯಾರಿಸ್: 26,558 ಅಡಿ(8095 ಮೀಟರ್) ಉದ್ದದ ವೆಡ್ಡಿಂಗ್ ಡ್ರೆಸ್‍ವೊಂದನ್ನ ಫ್ರಾನ್ಸ್ ನಲ್ಲಿ ತಯಾರಿಸಲಾಗಿದೆ. ಇದು ಜಗತ್ತಿನ ಅತೀ ಉದ್ದದ ವೆಡ್ಡಿಂಗ್ ಡ್ರೆಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ.ಕನ್ ಸ್ಟ್ರಕ್ಷನ್ ಕಂಪನಿ ಡೈನಮಿಕ್ ಪ್ರಾಜೆಕ್ಟ್ಸ್, 15 ಸ್ವಸಹಾಯಕರ ಸಹಾಯ ಪಡೆದು 2 ತಿಂಗಳ ಅವಧಿಯಲ್ಲಿ ಈ ಡ್ರೆಸ್ ತಯಾರಿಸಿದೆ. ಮೊದಲು ಪ್ರತ್ಯೇಕ ತುಂಡುಗಳನ್ನ ತಯಾರಿಸಿಕೊಂಡು ನಂತರ ಉದ್ದದ ವೆಡ್ಡಿಂಗ್ ಡ್ರೆಸ್ ಹೊಲಿಯಲಾಗಿದೆ. ಈ ಹಿಂದೆ ದಾಖಲೆ ಮಾಡಿದ್ದ 3,949.8 ಅಡಿ(1203.9 ಮೀಟರ್) ಉದ್ದದ ಬಟ್ಟೆಯನ್ನು ಕೂಡ ಈ ತಂಡ ಬಳಸಿಕೊಂಡಿದೆ.ಲೇಸ್ ತಯಾರಿಕೆಗೆ ಪ್ರಸಿದ್ಧವಾಗಿರೋ ಫ್ರಾನ್ಸ್ ನ ಕಾಡ್ರಿಯಲ್ಲಿ ಈ ವೆಡ್ಡಿಂಗ್ ಡ್ರೆಸ್ ಅನಾವರಣ ಮಾಡಲಾಯಿತು. ವೃತ್ತಿಪರ ಸರ್ವೇಯರ್ ಕ್ರಿಸ್ಟೋಫ್ ಡ್ಯುಮೋಂಟ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ತೀರ್ಪುಗಾರರಾದ ರಾಬ್ ಮೊಲ್ಲಿ ಡ್ರೆಸ್ ನ ಉದ್ದಳತೆಯನ್ನ ಪರಿಶೀಲಿಸಿ ಕಂಪನಿಗೆ ಸರ್ಟಿಫಿಕೇಟ್ ನೀಡಿದ್ದಾರೆ.ಬಳಿಕ ವೆಡ್ಡಿಂಗ್ ಡ್ರೆಸ್ ವಿವಿಧ ಭಾಗಗಳಾಗಿ ಕತ್ತರಿಸಿ ಮಾರಾಟ ಮಾಡಲಾಗಿದೆ. ಇದರಿಂದ ಬಂದ ಹಣವನ್ನ ದಾನ ಮಾಡಲಾಗಿದೆ.Sign in to your account
Username or Email Address


Password

 Remember Me


