ಬೆಂಗಳೂರು: ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ಮಂಗಳಮುಖಿಗೆ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.ಬೆಂಗಳೂರಿನ ಆಸ್ಟೀನ್ ಟೌನ್‍ನಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ರಿಯಾನ ಎಂಬ ಮಂಗಳಮುಖಿಗೆ ಕೇರ್ ಸ್ಕ್ಯಾನ್ ಆಂಡ್ ಡಯಾಗ್ನೋಸ್ಟಿಕ್ ಸೆಂಟರ್ ಸಿಬ್ಬಂದಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ವ್ಯಕ್ತವಾಗಿದೆ.ಕೆಲವು ವೈಯಕ್ತಿಕ ಸಮಸ್ಯೆಗಳಿಂದ ಬಳಲುತ್ತಿದ್ದ ರಿಯಾನ ಇಂದು ಬೆಳಗೆ ಸ್ಕಾನಿಂಗ್ ಮಾಡಿಸಲೆಂದು ಸ್ಕ್ಯಾನಿಂಗ್ ಸೆಂಟರ್ ಗೆ ತೆರಳಿದ್ದರು. ಈ ವೇಳೆ ಸ್ಕ್ಯಾನಿಂಗ್ ಸೆಂಟರ್ ನ ಟೆಕ್ನಿಶಿಯನ್ ಆಗಿರೋ ಮಹೇಂದ್ರ ಎಂಬಾತ ಮೈಮೇಲಿದ್ದ ಬಟ್ಟೆಗಳನ್ನು ಸಂಪೂರ್ಣ ಕಳಚಿ ಮಲಗುವಂತೆ ಹೇಳಿದ್ದಾನೆ. ಆದ್ರೆ ರಿಯಾನ ಇದನ್ನು ನಿರಾಕರಿಸಿದ್ದಾರೆ. ಇದೀಗ ರಿಯಾನ ತನಗೆ ಮಹೇಂದ್ರ ಲೈಂಗಿಕ ಕಿರುಕುಳ ನೀಡಿದ್ದಾನೆ ಅಂತ ಆರೋಪಿಸುತ್ತಿದ್ದಾರೆ.Sign in to your account
Username or Email Address


Password

 Remember Me


