ದಾವಣಗೆರೆ: ಪತ್ನಿಯ ಗುಪ್ತಾಂಗಕ್ಕೆ ಬೆಂಕಿ ಹಚ್ಚಿ ಪತಿಯೊಬ್ಬ ವಿಕೃತಿ ಮೆರೆದಿರುವ ಘಟನೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.ತಿಪ್ಪನಾಯ್ಕ್ ಪತ್ನಿಗೆ ಬೆಂಕಿ ಇಟ್ಟು ವಿಕೃತಿ ಮೆರೆದ ಪತಿ. ಸಂತ್ರಸ್ತೆ ಲಕ್ಷ್ಮಿಬಾಯಿ ತೀವ್ರ ಸುಟ್ಟ ಗಾಯಗಳಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈ ದಂಪತಿಗೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಬ್ಬ ಮಗ ಕೂಡ ಇದ್ದಾನೆ.ಆರೋಪಿ ತಿಪ್ಪನಾಯ್ಕ್ ಪ್ರತಿನಿತ್ಯ ಕುಡಿದು ಲಕ್ಷ್ಮಿಬಾಯಿ ಮೇಲೆ ಹಲ್ಲೆ ನಡೆಸುತ್ತಿದ್ದನು. ತಿಪ್ಪನಾಯ್ಕ್ ಅನುಮಾನದ ಬುದ್ಧಿ ಹೊಂದಿದ್ದು, ಪ್ರತಿದಿನ ಪತ್ನಿಯ ಶೀಲ ಶಂಕಿಸಿ ಹೊಡೆಯುತ್ತಿದ್ದ. ಒಂದೆಡರು ಬಾರಿ ಸೀಮೆ ಎಣ್ಣೆ ಸುರಿದು ಕೊಲೆಗೂ ಯತ್ನಿಸಿದ್ದಾನೆ. ಆದರೆ ಆತನ ಸಹೋದರ-ಸಹೋರದನ ಪತ್ನಿ ಬಂದು ಕಾಪಾಡಿದ್ದರು. ಕೊನೆಗೆ ಲಕ್ಷ್ಮಿಬಾಯಿ ಪತಿಯ ಅನುಮಾನ ಬುದ್ಧಿಯಿಂದ ಬೇಸತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.ವಿಚ್ಛೇದನಕ್ಕೆ ಅರ್ಜಿ ಸಲ್ಲಿದ ಬಳಿಕ ತಿಪ್ಪನಾಯ್ಕ್ ಪತ್ನಿಯ ಮನವೊಲಿಸಿ ಮನೆಗೆ ವಾಪಸ್ ಕರೆತಂದಿದ್ದ. ಆದರೂ ತಿಪ್ಪಾನಾಯ್ಕನಿಗೆ ಅನುಮಾನದ ಬುದ್ಧಿ ಹೋಗಿರಲಿಲ್ಲ. ಸೋಮವಾರ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಲಕ್ಷ್ಮಿಬಾಯಿಯನ್ನು ತಡೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ನಂತರ ಸಹೋದರ ಲಕ್ಷ್ಮಿಬಾಯಿಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಸಂಬಂಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 Advertisement 




Sign in to your account
Username or Email Address


Password

 Remember Me


