ಬೆಂಗಳೂರು: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಬಿಜೆಪಿಗೆ ಶುಭಕೋರಿದ್ದಾರೆ.ಈ ಕುರಿತು ಟ್ವೀಟ್ ಮಾಡಿರೋ ರಮ್ಯಾ, ಬಿಜೆಪಿಗೆ ಧನ್ಯವಾದ. ಇಷ್ಟಕ್ಕೆ ನಾವು ಸುಮ್ಮನಾಗಲ್ಲ ಅಂತ ಹೇಳಿದ್ದಾರೆ.ರಮ್ಯಾ ಅವರ ಈ ಟ್ವೀಟ್ ಗೆ ಹಲವು ಮಂದಿ ಪ್ರತಿಕ್ರಿಯಿಸಿದ್ದು, ಬೇರೆ ಚುನಾವಣೆ ಹೋಲಿಸಿದರೆ ಬಿಜೆಪಿ ದೊಡ್ಡ ನಾಯಕರು ಅತಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಹೀಗಾಗಿ ಕಮಲ ಇಲ್ಲಿ ಅರಳಿದೆ. ಈ ರೀತಿ ಪ್ರಚಾರ ಮಾಡಿದಂತೆ ಬೇರೆ ರಾಜ್ಯದಲ್ಲಿ ಬಿಜೆಪಿ ಪ್ರಚಾರ ನಡೆಸಿಲ್ಲ  ಎಂದು ಹೇಳಿದ್ದಾರೆ.ಇತ್ತೀಚಿನ ವರದಿಗಳ ಪ್ರಕಾರ ಗುಜರಾತ್ ನ ಒಟ್ಟು 182 ಕ್ಷೇತ್ರಗಳಲ್ಲಿ ಬಿಜೆಪಿ 106ರಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಕಾಂಗ್ರೆಸ್ 73ರಲ್ಲಿ ಮುನ್ನಡೆ ಸಾಧಿಸಿದೆ. ಹಿಮಾಚಲಪ್ರದೇಶದ ಒಟ್ಟು 68 ಕ್ಷೇತ್ರಗಳಲ್ಲಿ 45ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, 20 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. Sign in to your account
Username or Email Address


Password

 Remember Me


