ಬೆಂಗಳೂರು: ಗುಜರಾತ್ ಫಲಿತಾಂಶ ರಾಜ್ಯದ ಚುನಾವಣೆಗೆ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗುಜರಾತಿನಲ್ಲಿ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ದಾಪುಗಾಲಿಟ್ಟಿದೆ. ಅಲ್ಲಿನ ಫಲಿತಾಂಶ ರಾಜ್ಯದ ಚುನಾವಣೆಗೆ ಸಂಬಂಧವಿಲ್ಲ. ಸ್ವಲ್ಪ ಮಟ್ಟಿನ ಪರಿಣಾಮವಾಗಬಹುದು. ಆದ್ರೆ ಸ್ಥಳೀಯ ಬೆಳವಣಿಗೆಗಳ ಮೇಲೆ ಚುನಾವಣೆ ಫಲಿತಾಂಶ ನಿಂತಿರುತ್ತೆ ಅಂತ ಹೇಳಿದ್ರು.ರಾಹುಲ್ ಗಾಂಧಿ ಬಗ್ಗೆ ಆರೋಪ ಮಾಡಿದವರಿಗೆ ಗುಜರಾತ್ ಫಲಿತಾಂಶದಿಂದ ಉತ್ತರ ಸಿಗಲಿದೆ. ರಾಷ್ಟ್ರರಾಜಕಾರಣದಲ್ಲಿ ಗುಜರಾತ್ ಫಲಿತಾಂಶ ಪರಿಣಾಮ ಬೀರಲಿದೆ ಅಂತ ಹೇಳಿದ್ದಾರೆ.ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ. ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ತಿಳಿದುಬರಲಿದೆ.Sign in to your account
Username or Email Address


Password

 Remember Me


