ಬೆಂಗಳೂರು: ನಗರದಲ್ಲಿ ಮತ್ತೊಂದು ಸುಪಾರಿ ಹತ್ಯೆಯ ಸಂಚು ಬಯಲಾಗಿದೆ. ಬೆಂಗಳೂರಿನಲ್ಲಿ ಬಿಸಿನೆಸ್ ಮ್ಯಾನ್ ಹತ್ಯೆಗೆ ಸುಪಾರಿ ನೀಡಿರುವ ಅಂಶ ಬೆಳಕಿಗೆ ಬಂದಿದೆ.ಬಿಸಿನೆಸ್ ಮ್ಯಾನ್ ಆಗಿರುವ ವಿಜಯ ಕೃಷ್ಣ ಮತ್ತು ಕುಟುಂಬಸ್ಥರ ಹತ್ಯೆಗೆ ಹೈದರಾಬಾದ್ ನಲ್ಲಿರುವ ವ್ಯಕ್ತಿಯೊಬ್ಬ ಗಂಗಾಧರ್ ಎಂಬಾತನಿಗೆ ಸುಪಾರಿ ನೀಡಿದ್ದಾನೆ.ಗಂಗಾಧರ್ ಡಿಸೆಂಬರ್ 5 ರಂದು ಸದಾಶಿವನಗರದಲ್ಲಿರುವ ವಿಜಯ ಅವರ ಮನೆಗೆ ತೆರಳಿ ಬೆದರಿಕೆ ಹಾಕಿದ್ದಾನೆ. ಒಂದು ಕಾರು ಹಾಗೂ ಎರಡು ಬೈಕಿನಲ್ಲಿ ಬಂದಿದ್ದ ಹಂತಕರು, ಕುತ್ತಿಗೆಗೆ ಡ್ರ್ಯಾಗರ್, ಲಾಂಗು ಇಟ್ಟು ಬೆದರಿಕೆ ಹಾಕಿದ್ದಾರೆ.ಯಾಕೆ ಎಂದು ವಿಜಯ್ ಅವರು ಪ್ರಶ್ನೆ ಮಾಡಿದ್ದಕ್ಕೆ ಆರೋಪಿ ಬಂದೂಕು ತೆಗೆದು ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಬಂದೂಕನ್ನ ತೋರಿಸಿ ನಿನ್ನನ್ನು ಹತ್ಯೆ ನಡೆಸಲು ಸುಪಾರಿ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ.ಆರೋಪಿಗಳು ಹತ್ಯೆ ನಡೆಸುವುದಾಗಿ ಬೆದರಿಕೆ ಹಾಕಿ ಪರಾರಿಯಾದರು. ತಕ್ಷಣ ವಿಜಯಕೃಷ್ಣ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Sign in to your account
Username or Email Address


Password

 Remember Me


