ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರ ಸಹೋದರ ಟಿ.ಸಿ.ದಯಾನಂದ ಗೂಂಡಾ ವರ್ತನೆ ತೋರಿದ್ದಾರೆ.ಪುರಸಭೆಯ ಹಾಲಿ ಸದಸ್ಯ ಮಾಜಿ ಅಧ್ಯಕ್ಷನೂ ಆಗಿರುವ ದಯಾನಂದ, ಪುರಸಭೆಗೆ ಮಾಹಿತಿ ಕೇಳಿ ಬಂದ ಮಂಜುನಾಥ್ ಎಂಬ ವಕೀಲರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾರ್ಯಕ್ರಮವೊಂದರ ಪ್ಲೆಕ್ಸ್ ಕಟ್ಟುವ ಉದ್ದೇಶದಿಂದ ಶುಲ್ಕ ಪಾವತಿಸಲು ಮಂಜುನಾಥ್ ಪುರಸಭೆಗೆ ಬಂದಿದ್ರು. ಮಂಜುನಾಥ್ ಕಚೇರಿ ಒಳಗೆ ಇದ್ದುದ್ದನ್ನು ಕಂಡ ದಯಾನಂದ `ಒಳಗೆ ಬರಲು ನೀನ್ಯಾರೋ, ಮಾಹಿತಿ ಬೇಕಾದ್ರೆ ಹೊರಗಿನಿಂದ ಕೇಳು’ ಎಂದು ಕೊರಳಪಟ್ಟಿ ಹಿಡಿದು ಹೊರಹಾಕಿದ್ದಾರೆ. ಅಲ್ಲದೆ ಕೆನ್ನೆಗೆ, ಹೊಟ್ಟೆಗೆ ಹೊಡೆದಿದ್ದಾನೆ.ವಕೀಲರ ಮೇಲೆ ದಯಾನಂದ ನಡೆಸಿದ ದರ್ಪದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಂಜುನಾಥನ ತಂದೆ ಕೂಡಾ ಪುರಸಭೆ ಸದಸ್ಯರಾಗಿದ್ದು, ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ರಾಜಕೀಯ ದ್ವೇಷದಿಂದ ಕೂಡ ದಯಾನಂದ ಮಂಜುನಾಥನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಚಿಕ್ಕನಾಯಕನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.







 Advertisement 











 Advertisement 




Sign in to your account
Username or Email Address


Password

 Remember Me


