ರಾಯಚೂರು: ಸರ್ಕಾರಿ ನಿಯಮಗಳನ್ನ ಜಾರಿಯಲ್ಲಿಡಬೇಕಾದ ಸರ್ಕಾರಿ ಅಧಿಕಾರಿಗಳು, ಮಂತ್ರಿಗಳೇ ನಿಯಮಗಳನ್ನ ಉಲ್ಲಂಘನೆ ಮಾಡಿದ್ರೆ ಸಾರ್ವಜನಿಕರು ಹೇಗೆ ತಾನೆ ಪಾಲನೆ ಮಾಡುತ್ತಾರೆ? ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಆರ್ ಟಿ ಒ ನಿಯಮಗಳನ್ನ ಉಲ್ಲಂಘಿಸಿದ್ದಾರೆ.ಸಚಿವ ತನ್ವೀರ್ ಸೇಠ್ ತಮ್ಮ ಕಾರಿನ ನಂಬರ್ ಪ್ಲೇಟ್ ಮೇಲೆ ಫ್ಯಾನ್ಸಿ ಸಂಖ್ಯೆಯನ್ನು ಬರೆಸಿದ್ದಾರೆ. ಅವರ ಸರ್ಕಾರಿ ಕಾರಿನ ಸಂಖ್ಯೆ ಕೆ.ಎ52 ಜಿಎ0009 ಇದ್ದು, ಸೊನ್ನೆಗಳನ್ನ ಚಿಕ್ಕದಾಗಿ ಬರೆದು 9 ಸಂಖ್ಯೆಯನ್ನ ದೊಡ್ಡದಾಗಿ ಬರೆಸಿದ್ದಾರೆ.ಆರ್ ಟಿ ಒ ನಿಯಮದ ಪ್ರಕಾರ ಎಲ್ಲಾ ಅಂಕಿಗಳು ಸಮಾನ ಗಾತ್ರದಲ್ಲಿ ಒಂದೇ ಆಕಾರದಲ್ಲಿ ಇರಬೇಕು. ಕನ್ನಡದಲ್ಲಿ ಬರೆದ ಸಂಖ್ಯೆಗಳು ಸರಿಯಾಗಿದ್ದು, ಇಂಗ್ಲೀಷ್ ನಲ್ಲಿ ಬರೆದ ಸಂಖ್ಯೆಗಳಲ್ಲಿ ವ್ಯತ್ಯಾಸ ಮಾಡಿದ್ದಾರೆ. ಸಾರ್ವಜನಿಕರು ಈ ರೀತಿ ನಂಬರ್ ಪ್ಲೇಟ್ ಬರೆಸಿದರೆ ಆರ್ ಟಿ ಒ ಹಾಗೂ ಸಂಚಾರಿ ಪೊಲೀಸರು ಡಿಫೆಕ್ಟೀವ್ ನೇಮ್ ಪ್ಲೇಟ್ ಅಂತ 100 ರೂಪಾಯಿ ದಂಡ ಹಾಕ್ತಾರೆ. ಆದ್ರೆ ಇದೀಗ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಏನ್ ಮಾಡ್ತಾರೋ ನೋಡಬೇಕಿದೆ.Sign in to your account
Username or Email Address


Password

 Remember Me


